ಬಿ.ಆರ್.ಬಿ. ಮಹಾವಿದ್ಯಾಲಯ: ವಿಶ್ವಜಲ ದಿನಾಚರಣೆ

ರಾಯಚೂರು,ಮಾ.೨೩- ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವತಿಯಿಂದ ವಿಶ್ವಜಲ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀರಾಮ ಬೂಬ ಅವರು ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅತಿಥಿಗಳಾಗಿ ಡಾ. ಆಂಜಿನೇಯ ಓಬಳೇಶ ಉಪ-ಪ್ರಾಚಾರ್ಯರು ಎಲ್.ವಿ.ಡಿ. ಮಹಾವಿದ್ಯಾಲಯ ನರ ಇವರು ಆಗಮಿಸಿದ್ದರು. ಅವರು ಜೀವರಾಶಿಗಳಿಗೆ ನೀರಿನ ಅಗತ್ಯತೆಯ ಕುರಿತು ಮಾತನಾಡಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ನೀರಿನ ಸರಿಯಾದ ಬಳಕೆಯ ವಿಧಾನವನ್ನು ಜನರಲ್ಲಿ ಜಾಗೃತಿ ಮೂಡಿಸುವ ಜವಬ್ದಾರಿಯನ್ನು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿದ “ನೀರಿನ ಅರವಟ್ಟಿಗೆ” ಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಐಶ್ವರ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಪ್ರಾಚಾರ್ಯರಾದ ಡಾ. ಶೀಲಾಕುಮಾರಿ ದಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನೋಜ ಎಲ್ಲರನ್ನು ಸ್ವಾಗತಿಸಿದರು. ಪೂಜಿತ ಕೆ. ಉಪ-ಪ್ರಾಚಾರ್ಯರು ಪ್ರತಿಜ್ಞಾ ವಿಧಿ ಬೋಧಿಸಿದರು. ತೈಸಿನ್ ರಜ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ಎನ್.ಎಸ್.ಎಸ್. ಅಧಿಕಾರಿ ಡಾ.ಶ್ಯಾಮ ಗಾಯಕವಾಡ, ಐಕ್ಯೂಎಸಿ ಅಧಿಕಾರಿ ಸಂದೀಪ ಕಾರಭಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.