ಬಿ.ಆರ್.ಬಿ. ಕಾಲೇಜ್: ಟೇಬಲ್ ಟೆನ್ನಿಸ್ ಕಾರ್ಯಗಾರ

ರಾಯಚೂರು,ಮಾ.೧೯- ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯ ಮತ್ತು ಡಿಸ್ಟಿಕ್ ಅಸೋಸಿಯೇಶನ್ ಟೇಬಲ್ ಟೆನ್ನಿಸ್ ರಾಯಚೂರು ಇವರುಗಳ ಸಹಯೋಗದಲ್ಲಿ ದಿನಾಂಕ ೧೮.೦೩.೨೦೨೩ ರಂದು ಟೇಬಲ್ ಟೆನ್ನಿಸ್ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರವನ್ನು ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ರತಿಲಾಲ್ ಪಟೇಲ್ ಅವರು ಉದ್ಘಾಟಿಸಿದರು. ಅವರು ಟೇಬಲ್ ಟೆನ್ನಿಸ್ ಕ್ರೀಡೆ ಬೆಳೆದು ಬಂದ ಬಗೆ, ಆಟಗಳ ಮಹತ್ವವನ್ನು, ಉದ್ಯೋಗವಕಾಶಗಳ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಚೇತನ ದೋಖಾ ಅವರು ಮಾತನಾಡಿ ಮಹಾವಿದ್ಯಾಲಯದಲ್ಲಿ ಎಲ್ಲಾ ಸವಲತ್ತುಗಳನ್ನು ನೀಡುತ್ತೇವೆ. ಅವುಗಳನ್ನು ಬಳಸಿಕೊಂಡು ಯಶಸ್ವಿಯಾಗಬೇಕೆಂದು ಎಂದು ಶುಭ ಹಾರೈಸಿದರು.
ಇನ್ನೊರ್ವ ಅತಿಥಿಗಳಾದ ಈರಣ್ಣ ಕಾರ್ಯದರ್ಶಿ ಡಿಸ್ಟಿಕ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅವರು ಬಿ.ಆರ್.ಬಿ. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಾವು ಕ್ರೀಡೆಯಲ್ಲಿ ಭಾಗವಹಿಸಿರುವುದನ್ನು ನೆನಪಿಸಿಕೊಂಡು ತಮಗೆ ಮನ:ಪೂರ್ವಕವಾಗಿ ತರಬೇತಿ ನೀಡುತ್ತೇನೆ ಎಂದು ಹರ್ಷವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಜತಿನ್ ಪರೇಕ ಮಾಜಿ ಅಧ್ಯಕ್ಷರು ಡಿಸ್ಟಿಕ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅವರು ಕೋಚ ಅಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಇವರೊಂದಿಗೆ ರಾಘವೇಂದ್ರ, ವಿಶ್ವನಾಥ ಅವರು ಭಾಗಿಯಾಗಿದ್ದರು. ನಂತರ ಸಮಾರೋಪ ಸಮಾರಂಭ ಜರುಗಿತು. ಈ ಕಾರ್ಯಕ್ರಮಕ್ಕೆ ರಾಮಬೂಬ ಅಧ್ಯಕ್ಷರು ವ್ಯವಸ್ಥಾಪಕ ಮಂಡಳಿ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವು ಸೀಮಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀ.ಸಂಪತ ಅಂಗಡಿ ವಿ ದೈಹಿಕ ನಿರ್ದೇಶಕರು ಪ್ರಾಸ್ತವಿಕ ಮಾತನಾಡಿದರು. ಶಶಿಕಲಾ ಎಲ್ಲರನ್ನು ಸ್ವಾಗತಿಸಿದರು. ಪ್ರಾಚಾರ್ಯರಾದ ಡಾ. ಶೀಲಾಕುಮಾರಿ ದಾಸ ಅಧ್ಯಕ್ಷತೆ ವಹಿಸಿದ್ದರು. ರವಳಿಕಾ ವಂದನಾರ್ಪಣೆ ಮಾಡಿದರು. ಪೂಜಿತ ಕೆ ಉಪ-ಪ್ರಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಸಂದೀಪ ಕಾರಭಾರಿ, ಬೋಧಕ-ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.