ಬಿ.ಆರ್.ಬಿ. ಕಾಲೇಜಿನಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ

ರಾಯಚೂರು,ಜ.೧೯- ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯಲದಲ್ಲಿ ದಿ.೧೭.೦೧.೨೦೨೩ ರಂದು ಸುಗ್ಗಿ ಹಬ್ಬ ಸಂಕ್ರಾಂತಿ-೨೩ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಬ್ಬಡ್ಡಿ, ಲಗೋರಿ, ಹಗ್ಗಜಗ್ಗಾಟ, ಹಗ್ಗದಾಟ, ಗೋಣಿಚೀಲ ಓಟ, ಚಮಚಾನಿಂಬೆಕಾಯಿ ಆಟಗಳನ್ನು ಆಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಈ ಕಾರ್ಯಕ್ರಮವು ಕೃತಿ ಮತ್ತು ಉಷಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಶಶಿಕಲಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ಲಾ ಕ್ರೀಡೆಗಳನ್ನು ಸಂಪತ್ ಅಂಗಡಿ ವಿ ಅವರು ನಡೆಸಿಕೊಟ್ಟರು. ಪ್ರಾಚಾರ್ಯರಾದ ಡಾ. ಶೀಲಾಕುಮಾರಿ ದಾಸ ಸುಗ್ಗಿ ಹಬ್ಬದ ಮಹತ್ವ ಹೇಳಿ ಮಕ್ಕಳಿಗೆ ಕಬ್ಬು, ಬಾಳೆಹಣ್ಣು, ಕುಸುರೆಳ್ಳು ಹಂಚಿದರು. ಹುಡಿಗಿಯರಿಗೆ ಬಳೆಗಳನ್ನು ತೊಡಿಸಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಪೂಜಿತ ಕೆ, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.