ಬಿ.ಆರ್.ಬಿ. ಕಾಲೇಜಿನಲ್ಲಿ ಡಿಜಿಟಲ್ ಲೈಬ್ರರಿ: ಕಾರ್ಯಗಾರ

ರಾಯಚೂರು,ಮಾ.೧೭- ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯ ಮತ್ತು ನಗರ ಕೇಂದ್ರ ಗ್ರಂಥಾಲಯ ರಾಯಚೂರು ಇವರುಗಳ ಸಹಯೋಗದಲ್ಲಿ ದಿನಾಂಕ ೧೬.೦೩.೨೦೨೩ ರಂದು ಡಿಜಿಟಲ್ ಲೈಬ್ರರಿ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರವನ್ನು ಡಾ. ಮಾಚೇಂದ್ರನಾಥ ಹಿರಿಯ ಗ್ರಂಥಪಾಲಕರು ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಡಿಜಿಟಲ್ ಲೈಬ್ರರಿಯ ಸಾಧಕ ಬಾಧಕರ ಕುರಿತು ಮಾತನಾಡಿದರು. ಹಾಗೆಯೇ ಡಾ. ಪದ್ಮಾವತಿ Uಂಥಪಾಲಕರು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಾಯಚೂರು ಇವರು ವಿವಿಧ ವೆಬ್‌ಸೈಟುಗಳಿಂದ ವಿಷಯ ಪಡೆದುಕೊಳ್ಳುವ ವಿಧಾನವನ್ನು ಪ್ರಯೋಗಾತ್ಮಕವಾಗಿ ತೋರಿಸಿಕೊಟ್ಟರು. ಶ್ರೀ. ಮಲ್ಲಿಕಾರ್ಜುನ ಬಿರಾದಾರ ಗ್ರಂಥಪಾಲಕರು ವೆಬ್‌ಸೈಟ್ ಕುರಿತು ಮಾಹಿತಿ ನೀಡಿದರು. ಮಂಜುನಾಥ ಪತ್ತಾರ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಬಳಸಬಹುದಾದ ವೆಬ್‌ಸೈಟ್ ಮಾಹಿತಿ ನೀಡಿದರು.
ಕಾರ್ಯಕ್ರವ್ಮದಲ್ಲಿ ಮಹಾವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಶ್ರೀರಾಮ ಬೂಬ, ಕಾರ್ಯದರ್ಶಿಗಳಾದ ಶ್ರೀ. ಚೇತನ ದೋಖಾ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವು ಕೃತಿ ತುಪ್ಪಸಕ್ಕರಿಯವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ರವಳಿಕಾ, ಸಂಪತ ಅಂಗಡಿ ವಿ ಕಾರ್ಯಕ್ರಮ ನಿರೂಪಿಸಿದರು. ಪೂಜಿತ ಕಸುಮೂರ್ತಿ ಉಪ-ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಶಶಿಕಲಾ ಅತಿಥಿ ಪರಿಚಯ ಮಾಡಿದರು. ಮಮತಾ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂದೀಪ ಕಾರಭಾರಿ, ತಿಪ್ಪಣ್ಣ, ಡಾ.ಶ್ಯಾಮ ಗಾಯಕವಾಡ್ ಹಾಗೂ ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.