ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಆಳಂದ -ಗಾಣಗಾಪೂರ ರಸ್ತೆ ತಡೆದು ಚಳುವಳಿ

ಆಳಂದ:ನ.12:ಬಿಜೆಪಿ ಶಾಸಕ ಸುಭಾಷ ಗುತ್ತೇದಾರ ಅವರ ಕೆಲಸ ಮನೆಗೆ ನಾಮಕೆ ವಾಸ್ತತೆ ಸುಣ್ಣ ಬಳಿದ ರಸ್ತೆ ಕಾಮಗಾರಿಗಳ ನಡೆಯುತ್ತಿವೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.

ಪಟ್ಟಣದ ಹೊರ ವಲಯದ ಆಳಂದ -ಗಾಣಗಾಪೂರ ಮುಖ್ಯ ರಸ್ತೆಯಲ್ಲಿ ತಾಲ್ಲೂಕು ಯುವ ಕಾಂಗ್ರೇಸ ವತಿಯಿಂದ ಕಳಪೆ ಕಾಮಗಾರಿ ವಿರೋಧಿಸಿ ರಸ್ತೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಶಾಸಕ ಕೈಗೊಂಬೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ಮಾಡುತ್ತಿದ್ದಾರೆ. ಆಳಂದ -ಗಾಣಗಾಪುರ ರಸ್ತೆ ಕಾಮಗಾರಿ ಕೂಡಾ ಅದೇ ತರಹದ ಆಗಿದೆ ಹಾಗೂ ಚೆಕ್‍ಪೋಸ್ಟದಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವರೆಗೆ ಲೊಕೋಪಯೋಗಿ ಇಲಾಖೆಯಲ್ಲಿ 3.75 ಕೋಟಿ ರೂ.ಯಲ್ಲಿ ರಸ್ತೆ ಡಾಂಬರೀಕರಣ ಮಾಡಿ ಮತ್ತೆ 2 ತಿಂಗಳಲ್ಲಿ ಕೆಕೆ ಆರ್‍ಡಿಬಿಯಲ್ಲಿ 2 ಕೋಟಿ ರೂ.ಯಲ್ಲಿ ರಸ್ತೆ ಅಭಿವೃದ್ಧಿ ಅನುದಾನ ಪಡೆದು ಹಣ ಮಾತ್ರೆ ಯಾವುದೇ ಕೆಲಸ ಮಾಡಿಲ್ಲ ಮತ್ತು ಧಂಗಾಪೂರ ನಿಂಬರ್ಗಾ ರಸ್ತೆ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಹೇಳಿದರು.

ನಂತರ ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ಬಿರಾದಾರ, ಪಿಎಂಜಿಎಸ್‍ವಾಯ್ ಎಇ ಸುಭಾಷ , ಎಇಇ ಎಸ್.ಎಸ್.ಪಟ್ನೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ಕಾಮಗಾರಿಗಲು ಕಳಪೆ ಮಟ್ಟದಿಂದ ಕೂಡಿದ್ದು ಕೆಟ್ಟಿರುವ ರಸ್ತೆಗಳನ್ನು ಅಂದಾಜು ಪಟ್ಟಿಯಂತೆ ನಿಗದಿತ ಸಮಯದಲ್ಲಿ ಕೆಲಸ ಮಾಡುವುದಾಗಿ ಮುಚ್ಚಳಕೆ ಪತ್ರದ ಬರೆದು ಕೊಟ್ಟ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ಶಿವಾಜಿ ರಾಠೋಡ, ಮಲ್ಲಿಕಾರ್ಜುನ ಬೋಳಣಿ, ಸಿದ್ಧರಾಮ ಪ್ಯಾಟಿ ಮಾತನಾಡಿದರು.

ಮುಖಂಡರಾದ ಗುರುಶರಣ ಪಾಟೀಲ್, ಲಿಂಗರಾಜ ಪಾಟೀಲ್, ಶಿವಪುತ್ರ ನಡಗೇರಿ, ಶಿವಪ್ಪ ವಾರೀಕ, ಮಲ್ಲಿನಾಥ ಹತ್ತರಕಿ, ಗುಲಾಬ ಹುಸೇನ ಟಪ್ಪೇವಾಲೆ, ರಾಜಶೇಖರ ಪಾಟೀಲ್ ಚಿತಲಿ , ಮುಕುಟ ಸುಲೇಮಾನ, ಸುಭಾಷ ಪೋಜಿ, ವಿಜಯ ಹತ್ತರಕಿ, ಶ್ರೀಮಂತ ವಾಗ್ದರಗಿ ಸೇರಿದಂತೆ ಕಾಂಗ್ರೇಸ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

ಪಿಎಸ್‍ಐ ಮಹಾಂತೇಶ ಪಾಟೀಲ್ ನೇತೃತ್ವದಲ್ಲಿ ಬೀಗಿ ಪೊಲೀಸ ಬಂದೋಬಸ್ತ ಕಲ್ಪಿಸಲಾಯಿತು.