ಬಿ.ಆರ್.ಪಾಟೀಲ್‍ಗೆ ಮಂತ್ರಿ ಸ್ಥಾನ ನೀಡಲು ಆಗ್ರಹ

ಕಲಬುರಗಿ:ಮೇ.19:ಹಿರಿಯ ರಾಜಕಾರಣಿಗಳು ವಿಧಾನ ಪರಿಷತ್ ಮಾಜಿ ಸಭಾಪತಿ ಆಗಿರುವ ಶಾಸಕ ಬಿ. ಆರ್. ಪಾಟೀಲರನ್ನು ಪ್ರಮುಖ ಖಾತೆಯ ಸಚಿವರನ್ನಾಗಿ ಮಾಡಬೇಕು ಎಂದು ವಿಶ್ವನಾಥ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಗುರು ಶರಣು ಲಾವಣಿ ಜಿಡಗಾ ಪತ್ರಿಕಾ ಹೇಳಿಕೆಯ ಮುಖಾಂತರ ಕಾಂಗ್ರೆಸ್ ಹೈಕಮಾಂಡಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಒಂದು ಹೊರಡಿಸಿರುವ ಗುರು ಶರಣ ಲಾವಣಿ ಅವರು ಕ್ಷೇತ್ರದ ಇತಿಹಾಸದಲ್ಲಿ ಒಮ್ಮೆಯೂ ಯಾವ ಸರ್ಕಾರ ಬಂದರು ಸಹ ಇಲ್ಲಿ ಗೆದ್ದ ಶಾಸಕರಿಗೆ ಕ್ಷೇತ್ರದಿಂದ ಸಚಿವ ಸ್ಥಾನ ನೀಡಿಲ್ಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಿ. ಆರ್. ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರಲ್ಲಿ ಒಳ್ಳೆಯ ನಾಯಕತ್ವ ಗುಣ ಹೊಂದಿದ್ದಾರೆ. ಪ್ರಮುಖ ಯಾವ ಖಾತೆ ನೀಡಿದರು ಸಹ ನಿರ್ವಹಿಸಬಲ್ಲ ಸಾಮಥ್ರ್ಯ ಉಳ್ಳ ನಾಯಕರಾಗಿದ್ದು ಹೀಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಬಿ. ಆರ್. ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಆಳಂದ್ ಕ್ಷೇತ್ರಕ್ಕೆ ನ್ಯಾಯ ಒದಗಿಸಲು ಸಾಮಾಜಿಕ ಹೋರಾಟಗಾರ ಗುರು ಶರಣ ಲಾವಣಿ ಆಗ್ರಹಿಸಿದ್ದಾರೆ.