ಬಿ.ಆರ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

ಕಲಬುರಗಿ:ಮೇ.17: ಆಳಂದ ತಾಲೂಕಿನ ನೂತನ ಶಾಸಕರಾದ ಬಿ.ಆರ್.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಾದನಹಿಪ್ಪರಗಾ ಎಸ್ಸಿ ಎಸ್ಟಿ ಬ್ಲ್ಯಾಕ್ ಅಧ್ಯಕ್ಷ ಅಮೃತ ಸಜ್ಜನ ಗೋಳಾ ಅವರು ಅಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿ.ಆರ್.ಪಾಟೀಲ ಅವರು ಉತ್ತಮ ಕಾರ್ಯ ಮಾಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬರಲು ಅವರದ್ದು ಪ್ರಮುಖ ಪಾತ್ರವಿದೆ. ಈ ಹಿಂದೆ ಅವರು ಜನಪರ,ರೈತಪರ, ಹೋರಾಟವನ್ನು ಮಾಡಿದ್ದು ಈ ತಾಲೂಕು ಇತಿಹಾಸ ಪುಟದಲ್ಲಿದೆ.ರಾಜ್ಯದ ಲಿಂಗಾಯತ ಪ್ರಭಾವಿ ನಾಯಕರಾಗಿದ್ದು ಬಸವಾದಿ ಶರಣರ ತತ್ವವನ್ನು ಅಳವಡಿಸಿಕೊಂಡಿರುವ ಪಾಟೀಲರಿಗೆ ಸಚಿವ ಸ್ಥಾನವನ್ನು ನೀಡಿದರೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದರು.ನಾಲ್ಕು ಬಾರಿ ಎಂಎಲ್‍ಎ ಹಾಗೂ ಒಂದು ಬಾರಿ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1952 ರಿಂದ ಇಲ್ಲಿಯವರೆಗೆ ಆಳಂದ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಿಗೆ ಮಂತ್ರಿ ಭಾಗ್ಯ ನೀಡಿಲ್ಲ ಹೀಗಾಗಿ ಕಾಂಗ್ರೆಸ್ ಹೈಕಮಾಂಡ ಇದನ್ನು ಗಂಭೀರವಾಗಿ ಪರಿಗಣಿಸಿ ನೂತನ ಶಾಸಕ ಬಿ.ಆರ್.ಪಾಟೀಲ ಅವರಿಗೆ ಸಚಿವ ಸ್ಥಾನವನ್ನು ಕಲ್ಪಿಸುವ ಮುಖಾಂತರ ಆಳಂದ ತಾಲೂಕಿನ ಅಭಿವೃದ್ಧಿಗಾಗಿ ಮುಂದಾಗಬೇಕು ಎಂದು ಅವರು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.