ಬಿ.ಆರ್. ಅಂಬೇಡ್ಕರ ಅವರಿಗೆ ನಮನ

ವಿಜಯಪುರ, ಡಿ.7-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ ವಿಜಯಪುರ ಜಿಲ್ಲಾ ಘಟಕವು ಭಾರತ ರತ್ನ ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಡಾ ಬಿ.ಆರ್. ಅಂಬೇಡ್ಕರವರ 65ನೇ ಮಹಾಪರಿನಿರ್ವಾಹನ ದಿನವನ್ನು ಶ್ರೀಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕೋಟಿ ನಮನಗಳನ್ನು ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಅಂಬೇಡ್ಕರವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು.ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು.ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ, ಎಂದು ಪರಿಚಯಿಸುತ್ತಿದ್ದರು.
ಶತಶತಮಾನಗಳಿಂದ ತುಳಿತಕ್ಕೊಳಪಟ್ಟ ಜನಾಂಗಗಳನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿ ಮಾನವರಂತೆ ಬದುಕಲು ಹಕ್ಕು ನೀಡಿದ್ದಾರೆ. ಜಾತಿ ವರ್ಗಗಳ ಮೇಲು ಕೀಳು ಎಂಬ ಅಜ್ಞಾನದಿಂದ ಬದುಕುತ್ತಿದ್ದ ಜನಾಂಗಗಳಿಗೆ ಸಮಾನತೆ ಹಕ್ಕನ್ನು ದಯಪಾಲಿಸಿದ್ದು ಇಂದಿನ ನಿಮ್ನ ವರ್ಗಗಳಿಗೆ ದೇಶ ವಿದೇಶಗಳಲ್ಲಿ ಬುಡಕಟ್ಟು ಜನಾಂಗಗಳಿಗೆ ಡಾ.ಅಂಬೇಡ್ಕರ ದೇವಮಾನವರಾಗಿದ್ದಾರೆ ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ ಮಾತನಾಡಿ, ಡಾ|| ಅಂಬೇಡ್ಕರ ಎಂದರೆ ಭಾರತದ ಬಡವರ ಕಣ್ಮನಿಯಾಗಿದ್ದಾರೆ. ಮಹಿಳೆಯರಿಗೆ ಸ್ಥಾನ ಮಾನ ನೀಡಿದ್ದು ಡಾ.ಅಂಬೇಡ್ಕರ. ಪಶು ಪ್ರಾಣಿಗಳಂತೆ ಕೀಳಾಗಿ ಕಾಣುತ್ತಿದ್ದ ಪುರುಷ ಪ್ರಧಾನ ಸಾಮ್ರಾಜ್ಯದಲ್ಲಿ ಗೌರವವನ್ನು ತಂದುಕೊಟ್ಟವರು ಡಾ.ಅಂಬೇಡ್ಕರ ಎಂದರು.
ಜಿಲ್ಲಾ ಗೌರವಾಧ್ಯಕ್ಷ ವಸಂತರಾವ ಕೋರ್ತಿ ಮಾತನಾಡಿ, ಭಾರತದಲ್ಲಿ ಮೊಟ್ಟ ಮೊದಲು ರಿಸರ್ವ ಬ್ಯಾಂಕ್ ಸ್ಥಾಪನೆ ಮಾಡಿದ ಮೊದಲ ವ್ಯಕ್ತಿ ಡಾ.ಅಂಬೇಡ್ಕರ. ಇಂದು ದೇಶ ವಿದೇಶಗಳಲ್ಲಿ ಭಾರತದ ಸಂವಿಧಾನದ ಮೂಲ ಆಶಯವನ್ನು ಪರರಾಷ್ಟ್ರಗಳ ಸಂವಿಧಾನಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಮಹಾಮೇದಾವಿ ಡಾ.ಅಂಬೇಡ್ಕರವರ ಸುವಿಚಾರಗಳು ಪ್ರಪಂಚದಲ್ಲಿ ಇಂದಿಗೂ ಜನಜನಿತವಾಗಿವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಶೋಭಾ ಬಡಿಗೇರ, ಸುವರ್ಣಾ ಸಜ್ಜನ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತಿ ಸೋನಾರ, ಸೌಜನ್ಯಾ ಸಜ್ಜನ, ಭಾಸು ರಾಠೋಡ, ಮನೋಜ ಹೊಸಮನಿ, ಲಕ್ಷ್ಮಣ ಕುಂಬಾರ, ಶಿವಾನಂದ ಕಾಕರಾಳ, ಶಂಕರ ವಡೆಯರ, ಶರಣು ಹಿರೆಕುರುಬರ, ಮಲ್ಲು ಕುರಿ, ಚನ್ನಪ್ಪ ಸಜ್ಜನ, ಈರನಗೌಡ ಪಾಟೀಲ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.