ಬಿ.ಅರ್.ಬಿ. ವಾಣಿಜ್ಯ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ರಾಯಚೂರು,ಏ.೧೬-ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂ.ಕಾಂ. ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ದಿನಾಂಕ ೧೫.೦೪.೨೦೨೩ ರಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಮರೇಗೌಡ ಸಹ-ಪ್ರಾಧ್ಯಾಪಕರು ಎಸ.ಎಸ್.ಆರ್.ಜಿ ಮಹಿಳಾ ಮಹಾವಿದ್ಯಾಲಯ ರಾಯಚೂರು ಆಗಮಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಕಠಿಣವಾಗಿ ಮಾಡಬೇಕು. ಇಂದಿನ ಆಧುನಿಕತೆಯಲ್ಲಿ ವಿದ್ಯಾರ್ಥಿಗಳ ಪುಸ್ತಕ ಓದುವ ಹವ್ಯಾಸವು ಕಡಿಮೆಯಾಗಿದೆ. ಅದ್ದರಿಂದ ಈ ಹಂತದಲ್ಲಿ ವಿದ್ಯಾರ್ಥಿ ಸಾಕಷ್ಟು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು. ಯಾವ ರೀತಿ ಎಂದರೆ ಡಾ. ಬಿ.ಆರ್.ಅಂಬೇಡ್ಕರ್ ಅವರ ರೀತಿಯಲ್ಲಿ ಏಕಾಗ್ರತೆಯಲ್ಲಿ ಓದಬೇಕು ಹಾಗೂ ಸ್ವಾಮಿ ವಿವೇಕನಂದರವರ ವಿಚಾರಗಳನ್ನು ಯುವಕರು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು. ಅಂತಿಮವಾಗಿ ಎಲ್ಲರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕೇಂದು ಹೇಳಿದರು. ತದನಂತರ ಕಾರ್ಯಕ್ರಮದಲ್ಲಿ ಎಂ.ಕಾಂ. ಸಂಯೋಜಕರಾದ ಶ್ರೀ ತಿಪ್ಪಣ್ಣ ಅವರು ಮಾತನಾಡಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಹಾಗೆಯೇ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮರ್ಗದರ್ಶನ ನೀಡಬೇಕೆಂದು ಮತ್ತು ವಿಷಯದಲ್ಲಿ ಪರಿಣಿತಿಯನ್ನು ಹೊಂದಬೇಕಾದರೆ ವಿಷಯದ ಮೂಲ ಪರಿಕಲ್ಪನೆಗಳನ್ನು ಚೆನ್ನಾಗಿ ಅಥೈಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಶೀಲಾಕುಮಾರಿ ದಾಸ ಅವರು ವಿದ್ಯಾರ್ಥಿಗಳನ್ನು ಕುರಿತು ಕಾಲೇಜಿನಲ್ಲಿ ಶಿಸ್ತು ಬದ್ಧವಾಗಿ ಬೋಧನೆಯನ್ನು ಮಾಡಲಾಗುತ್ತದೆ ನುರಿತ ಮತ್ತು ಅನುಭವವುಳ್ಳ ಉಪನ್ಯಾಸಕರನ್ನು ಬೋಧಿಸಲಗುತ್ತದೆ.
ಈ ಹಂತದಲ್ಲಿ ವಿದ್ಯಾರ್ಥಿಗಳು ಜ್ಞಾನರ್ಜನೆಯನ್ನು ಮಾಡಬೇಕೆಂದು ಹೇಳಿದರು. ವಿನೂಶ ಮತ್ತು ಶ್ರೀಲತ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಿರೂಪಣೆಯನ್ನು ಭಾರತಿ ನಿರೂಪಿಸಿದರೆ, ಸ್ವಾಗತವನ್ನು ವಿನೂಶ ನಡೆಸಿಕೊಟ್ಟರು. ಸುಕನ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ-ಪ್ರಾಚರ್ಯರಾದ ಪೂಜಿತ ಕೆ, ಐಕ್ಯೂಎಸಿ ಸಂಚಾಲಕರಾದ ಸಂದೀಪ ಕಾರಭಾರಿ, ಉಪಸ್ಥಿತರಿದ್ದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಈ ಸುಂದರ ಸಮಾರಂಭವನ್ನು ಆಯೋಜಿಸಿದ್ದರು.