ಬಿಹಾರ ವಿಶ್ವಾಸ ಮತಯಾಚನೆ ಚರ್ಚೆ ಆರಂಭ

ಪಾಟ್ನಾ, ಫೆ. ೧೨- ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಶ್ವಾಸ ಮತ ಯಾಚಿಸಿದ್ದು, ಚರ್ಚೆಗಳು ಆರಂಭವಾಗಿದೆ. ಅಚ್ಚರಿ ಬೆಳವಣೆಗೆಯಲ್ಲಿ ಆರ್‌ಜೆಡಿ ಪಕ್ಷ ಮೂವರು ಶಾಸಕರು ಆಡಳಿತ ಪಕ್ಷದ ಸಾಲಿನಲ್ಲಿ ಆಸನರಾಗಿದ್ದಾರೆ.
ಆರ್‌ಜೆಡಿ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡು ಮತ್ತೇ ಬಿಜೆಪಿ ಜೊತೆ ಜೆಡಿಯು ಸರ್ಕಾರ ರಚಿಸಿದ್ದು, ಇದೀಗ ತಮಗಿರುವ ಬಹುಮತ ಸಾಬೀತುಪಡಿಸಬೇಕಾಗಿದೆ. ಈ ಕುರಿತು ವಿಶ್ವಾಸ ಮತದ ಚರ್ಚೆಗಳು ಆರಂಭವಾಗಿದೆ.
ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿರುವ ಮೂವರು ಆರ್‌ಜೆಡಿ ಶಾಸಕರ ವರ್ತನೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಮತಗಳನ್ನು ಅಮಾನ್ಯಮಾಡಬೇಕು ಎಂದು ಒತ್ತಾಯಿಸಿದ್ದು ಬಿಜೆಪಿ- ಜೆಡಿಯು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿ ಸಂವಿಧಾನ ರೀತಿಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದೆ.
ಆರ್‌ಜೆಡಿ ಶಾಸಕರಾದ ಚೇತನ್ಯ, ಆನಂದ, ನೀಲಮ್ಮದೇವಿ ಹಾಗೂ ಪ್ರಹ್ಲಾದ್ ಯಾದವ್, ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದಾರೆ.
ಈ ವಿದ್ಯಮಾನಗಳ ನಡುವೆ ವಿಧಾನಸಭೆಯ ಸ್ಪೀಕರ್ ಹಾಗೂ ಆರ್ ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಪದಚ್ಯುತಗೊಳಿಸಿದ ಪ್ರಸ್ತಾವನೆಯನ್ನು ಕಲಾಪದಲ್ಲಿ ಮಂಡಿಸಲಾಗಿದೆ.
ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು ೧೨೫ ಶಾಸಕರು ನಿರ್ಣಯದ ಪರವಾಗಿ ಮತ ಚಲಾಯಿಸಿದೆರೆ ೧೧೨ ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.