ಬಿಹಾರ ರಾಜ್ಯಪಾಲರ ಪ್ರವಾಸ

ಕಲಬುರಗಿ,ಸೆ.26:ಬಿಹಾರ ರಾಜ್ಯದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಇದೇ ಸೆಪ್ಟೆಂಬರ್ 29 ರಂದು ಸಂಜೆ 5.15 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಇದೇ ಸೆಪ್ಟೆಂಬರ್ 30 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗುವ ಮೂಲಭೂತ ಕರ್ತವ್ಯಗಳು ಮತ್ತು ಮೌಲ್ಯಗಳು ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಅಕ್ಟೋಬರ್ 1 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.