ಬಿಹಾರ ಖಾತೆ ಹಂಚಿಕೆ: ನಿತೀಶ್ ಗೆ ಗೃಹ,ತಾರ ಕಿಶೋರ್ ಹಣಕಾಸು

ಪಾಟ್ನಾ,ನ. 17- ನಿನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಸಂಪುಟದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ತಮ್ಮ ಬಳಿ ಗೃಹ, ಗುಪ್ತದಳ ಸೇರಿದಂತೆ ವಿವಿಧ ಖಾತಗಳನ್ನು‌ ತಮ್ಮ ಬಳಿಯೇ ಇಟ್ಟಿಕೊಂಡಿದ್ದಾರೆ.

ಬಿಜೆಪಿಯಿಂದ ಉಪ ಮುಖ್ಯಮಂತ್ರಿಯಾಗಿರುವ ತಾರ ಕಿಶೋರ್ ಅವರಿಗೆ ಹಣಕಾಸು ಮತ್ತೊಬ್ಬ ಉಪ ಮುಖ್ಯಮಂತ್ರಿ ರೇಣು ದೇವಿ್ಗೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್,‌ಹಿಂದುಳಿದ ವರ್ಗ ಗಳ ಕಲ್ಯಾಣ ಖಾತೆ,ಮತ್ತು ಕೈಗಾರಿಕಾ ಖಾತೆ ಹಂಚಿಕೆ ಮಾಡಿದ್ದಾರೆ.

ಜೆಡಿಯುನ ಶಾಸಕ ಹಾಗು ಮಾಜಿ ವಿದಾನಸಭಾಧ್ಯಕ್ಷ ವಿಜಯ್ ಕುಮಾರ್ ಚೌದರಿಗೆ ಗ್ರಾಮೀಣ ಇಂಜಿನಿಯರಿಂಗ್, ಜಲ ಸಂಪನ್ಮೂಲಗಳ, ವಾರ್ತಾ ಮತ್ತು ಪ್ರಸಾರ ಖಾತೆ, ಬಿರೇಂದ್ರ ಪ್ರಸಾದ್ ಅವರಿಗೆ ಇಂಧನ,ಯೋಜನೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ಮೇವಲಾಲ್ ಚೌಧರಿ ಅವರಿಗೆ ಶಿಕ್ಷಣ ಖಾತೆ ನೀಡಲಾಗಿದೆ‌

ಬಿಜೆಪಿಯ ಸಚಿವರಾದ ಶೀಲಾ ಕುಮಾರಿ ಅವರಿಗೆ ಸಾರಿಗೆ, ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ಪುತ್ರ ಹಾಗು ಎಚ್ ಎ ಎಂ ಶಾಸಕ ಸಂತೋಷ್ ಕುಮಾರ್ ಸುಮನ್ ಅವರಿಗೆ ಸಣ್ಣ ನೀರಾವರಿ ಮತ್ತು ಪರಿಶಿಷ್ಟ ಜಾತಿ ವರ್ಗ ದ ಕಲ್ಯಾಣ ಖಾತೆ, ವಿಐಪಿ ಪಕ್ಷದ ಮುಖೇಶ್ ಸಾಹ್ನಿಗೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಹಂಚಿಕೆ ಮಾಡಲಾಗಿದೆ‌

ಬಿಜೆಪಿಯ ಮಂಗಲ್ ಪಾಂಡೆಗೆ ಆಹಾರ,ರಸ್ತೆ,ಕಲೆ ಸಂಸ್ಕೃತಿ ಖಾತೆ,ಕೃಷಿ,ಸಹಕಾರ ಮತ್ತು ಸಕ್ಕರೆ ಖಾತೆ ನೀಡಲಾಗಿದೆ.ಅಮರೇಂದರ್ ಪ್ರತಾಪ್ ಸಿಂಗ್ ರಾಮ್ ಪ್ರಿತಗ ಪಾಸ್ವಾನ್ ಅವರಿಗೆ ಲೋಕೋಪಯೋಗಿ,ಜೀವೇಶ್ ಮಿಶ್ರಾ ಅವರಿಗೆ ಪ್ರವಾಸೋದ್ಯಮ ಮತ್ತು ಕಾರ್ಮ‌ಕಾತೆ,ರಾಮ್ ಸೂರತ್ ರವಿ ಅವರಿಗೆ ಕಂದಾಯ ಖಾತೆ ಹಂಚಿಕೆ ಮಾಡಲಾಗಿದೆ.

ವಿಶೇಷ ಅಧಿವೇಶನ

ನವಂಬರ್ 23 ರಿಂದ 27 ರ ತನಕ ಐದು‌‌ ದಿ‌ನಗಳ ವಿಶೇಷ ಅಧಿವೇಶನ ನಡೆಸಲು ಉದ್ದೇಶಿಲಾಗಿದೆ. 17 ನೇ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪ್ರಮಾಣ ವಚನ ನಡೆಯಲಿದೆ.