ಬಿಹಾರ: ಅಂಕಿ ಸಂಖ್ಯೆಗಳ ಆಟದಲ್ಲಿ ಎನ್ ಡಿಎ ಗೆಲುವು

ಮುಂಬೈ ನವಂಬರ್ ೧೨. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಅಂಕಿ-ಸಂಖ್ಯೆಗಳ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರೂ, ಪೈಪೋಟಿಯಲ್ಲಿ ನಿಜವಾದ ಗೆಲುವು ಸಾಧಿಸಿರುವುದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಎಂದು ಶಿವಸೇನೆ ಪ್ರತಿಕ್ರಿಯಿಸಿದೆ.
ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರ ನೇತೃತ್ವದ ಆರ್ಜೆಡಿ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ ಎಂದು ಶಿವಸೇನೆ ಹೇಳಿದೆ. ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಶಿವಸೇನೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಭಾರತೀಯ ಜನತಾ ಪಕ್ಷದ ಹಿಡಿತಕ್ಕೆ ಬಿಹಾರ ಅಂತಿಮವಾಗಿ ಸಿಲುಕಿದೆ. ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಬಿಹಾರದಲ್ಲಿ ಬಿಜೆಪಿ ಅದ್ವಿತೀಯ ಗೆಲುವು ಸಾಧಿಸಿದೆ. ಈ ಗೆಲುವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶಿವಸೇನೆ ತಿಳಿಸಿದೆ.
ಆದರೆ ಅಂಕೆ ಸಂಖ್ಯೆಗಳ ಹಾವು ಏಣಿ ಆಟ ದಲ್ಲಿ ಎನೆಡಿಯೆ ಗೆಲುವು ಸಾಧಿಸಿದ್ದರು ನಿಜವಾದ ಗೆಲುವು ಸಾಧಕ ಎಂದರೆ ೩೧ ವರ್ಷದ ತೇಜಸ್ವಿಯಾದ ಎಂದು ಶಿವಸೇನೆ ಬಣ್ಣಿಸಿದೆ.
ರಾಷ್ಟ್ರೀಯ ಜನತಾದಳ ಬಿಹಾರ ವಿಧಾನಸಭೆಯಲ್ಲಿ ಅತಿದೊಡ್ಡ ಏಕೈಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ ಬಹಳ ದಿನಗಳ ಕಾಲ ಇದೇ ಅದೃಷ್ಟ ಇರುವುದಿಲ್ಲ. ಸದ್ಯದ ಮಟ್ಟಿಗೆ ಅಧಿಕಾರ ಹಿಡಿಯುವ ವಿಜಯೋತ್ಸವದಲ್ಲಿ ಮೈತ್ರಿಕೂಟ ಸರ್ಕಾರ ಮಿಂದೆದ್ದರು ಮುಂಬರುವ ದಿನಗಳಲ್ಲಿ ತೇಜಸ್ವಿಯಾದ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿ ರೂಪಗಳಲ್ಲಿದೆ ಎಂದು ಹೇಳಲಾಗಿದೆ.
ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟ ೧೨೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ವಿಧಾನಸಭೆಯ ಒಟ್ಟು ೨೪೩ ಸ್ಥಾನಗಳ ಪೈಕಿ ೧೨೨ ಸ್ಥಾನಗಳಿಸಿದರೆ ಸರ್ಕಾರ ರಚಿಸಬಹುದಾಗಿದೆ. ಈ ಗೆಲುವಿನ ರೂವಾರಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಎಂದು ಶಿವ ಸೇನೆ ಹೇಳಿದೆ.
ತೇಜಸ್ವಿ ನೇತೃತ್ವದ ಮಹಾಘಟಬಂಧನ್ ೧೧೦ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕೊನೆಗಳಿಗೆಯಲ್ಲಿ ಕೆಲವು ಕ್ಷೇತ್ರಗಳು ತೇಜಸ್ವಿ ಮೈತ್ರಿಕೂಟಕ್ಕೆ ದಕ್ಕಲಿಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಬಿಹಾರದಲ್ಲಿ ಪರಸ್ಪರ ವಿರೋಧ ನಿಲುವು ಹೊಂದಿದ್ದ ಎರಡು ರಾಜಕೀಯ ಪಕ್ಷಗಳು ಗೆಲುವು ಸಾಧಿಸಿವೆ. ಬಿಜೆಪಿ ಹಾಗೂ ರಾಷ್ಟ್ರೀಯ ಜನತಾದಳ ಗೆಲುವಿನ ಸೂತ್ರದ ರಾಗಿದ್ದಾರೆ ಎಂದು ಶಿವಸೇನೆ ತಿಳಿಸಿದೆ.