ಬಿಸ್ತುವಳ್ಳಿ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ


ಜಗಳೂರು.ಜ.೧೫; ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಲೊಲಾಕ್ಷಮ್ಮ ಉಪಾಧ್ಯಕ್ಷರಾಗಿ ಗೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಸಂತೋಷ್ ಅಧಿಕೃತವಾಗಿ ಘೋಷಿಸಿದರು. ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ‌ ರಾಜಿನಾಮೆ ಹಿನ್ನೆಲೆ‌ ತೆರವಾದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ  ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಲೋಲಾಕ್ಷಮ್ಮಹನುಮಂತಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಗೀತಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.18 ಜನ ಸದಸ್ಯರಲ್ಲಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಒಮ್ಮತದಿಂದ ಅವಿರೋಧವಾಗಿ ಮೂರನೇ ಬಾರಿ ಅಧ್ಯಕ್ಷೆಯಾಗಿ ಲೋಲಾಕ್ಷಮ್ಮ ಉಪಾಧ್ಯಕ್ಷೆಯಾಗಿ ಗೀತಮ್ಮ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷೆ ಲೋಲಾಕ್ಷಮ್ಮಮಾತನಾಡಿ,ನನ್ನನ್ನು ಮೂರನೇ ಬಾರಿಗ್ರಾಮಪಂಚಾಯಿತಿ ಅಧ್ಯಕ್ಷೆಯನ್ನಾಗಿ ಆಯ್ಕೆಮಾಡಿದ ಸರ್ವರಿಗೂಅಭಿನಂದನೆಗಳು.ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಚರಂಡಿ ನೈರ್ಮಲ್ಯ,ಕುಡಿಯುವ ನೀರು ಪೂರೈಕೆ,ರಸ್ತೆ ಸೇರಿದಂತೆ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು.ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸಿ ಕೋವಿಡ್ ಮಧ್ಯೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೂಲಿಕಾರ್ಮಿಕ ವರ್ಗಕ್ಕೆ ನೆರವಾಗಲು ಶ್ರಮಿಸುತ್ತೇನೆ ಅಲ್ಲದೆ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗುವುದು ಸರ್ಕಾರದ ಅನುದಾನ ಸದ್ಬಳಕೆಗೆ ಸರ್ವ ಸದಸ್ಯರುಗಳು ಸಲಹೆ ಸಹಕಾರ ದೊಂದಿಗೆ ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದರು.ಸಂದರ್ಭದಲ್ಲಿ ಬಿಸ್ತುವಳ್ಳಿ ವಿ.ಎಸ್.ಎಸ್ಎನ್ ಅಧ್ಯಕ್ಷ  ಬಾಬು, ಗ್ರಾ.ಪಂ ಮಾಜಿ ಅಧ್ಯಕ್ಷೆ ಬಸಮ್ಮ,ಉಪಾಧ್ಯಕ್ಷೆ ಶೋಭ ಮೋಹನ್,ಸದಸ್ಯರಾದಅಂಜಿನಪ್ಪ,ಉಮಾಪತಿ,ರಾಜಣ್ಣ, ಕುಬೇರಪ್ಪ,ಶಂಭುಲಿಂಗಪ್ಪ,ಮಣಿಶಶಿನಾಯ್ಕ,ಕೃಷ್ಣಪ್ಪ,ಪಿ.ಡಿ.ಓ ಕೊಟ್ರೇಶ್,ರಸ್ತೆ ಮಾಚಿಕೆರೆ ಶಿವರಾಜ್,ಶಫಿವುಲ್ಲಾ,ಸೇರಿದಂತೆ ಇತರರು ಭಾಗವಹಿಸಿದ್ದರು.


Attachments areaReplyReply to allForward