ಬಿಸಿ ಬೇಳೆ ಬಾತ್

ಮಾಡುವ ವಿಧಾನ:
ಪುಡಿ ಮಾಡಲು:
ಕಡಲೇ ಬೇಳೆ: ಎರಡು ಟೇಬಲ್ ಚಮಚ
ಧನಿಯಾ: ಒಂದು ಟೇಬಲ್ ಚಮಚ
ಗಸಗಸೆ : ಒಂದು ಟೇಬಲ್ ಚಮಚ
ಉದ್ದಿನ ಬೇಳೆ: ಅರ್ಧ ಟೇಬಲ್ ಚಮಚ
ಚಕ್ಕೆ : ಒಂದು ಇಂಚು
ಲವಂಗ : ನಾಲ್ಕು
ಏಲಕ್ಕಿ: ಎರಡು
ಬ್ಯಾಡಗಿ ಮೆಣಸಿನ ಕಾಯಿ : ಹತ್ತು
ಕೊಬ್ಬರಿ ತುರಿ: ಎರಡು ಟೇಬಲ್ ಚಮಚ
ಮೇಲೆ ಹೇಳಿರುವ ಎಲ್ಲವನ್ನು ಬೇರೆ ಬೇರೆ ಎಣ್ಣೆ ಹಾಕದೆ ಹುರಿಯಿರಿ. ಮೆಣಸಿನ ಕಾಯಿ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.
ಕಾಲು ಕೆಜಿ ತೊಗರಿ ಬೇಳೆಯನ್ನು ತೊಳೆದು ಒಂದು ಚಮಚ ಎಣ್ಣೆ ಹಾಕಿ ಎರಡು ವಿಷಲ್ ಕೂಗಿಸಿಡಿ.
ಬೀನ್ಸ್, ಆಲೂಗೆಡ್ಡೆ, ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಮ್, ಗೋಬಿ ಮುಂತಾದ ತರಕಾರಿಗಳನ್ನು ಹಚ್ಚಿಡಿ.
ಕೆಜಿ ಅಕ್ಕಿ ತೊಳೆದು ನೆನೆಸಿಡಿ.
ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ನೆನೆಸಿಡಿ.
ಕುಕ್ಕರಿನಲ್ಲಿ ಎರಡು ಚಮಚ ಎಣ್ಣೆ ಹಾಕಿ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ನೆನೆಸಿದ ಅಕ್ಕಿ ಹಾಕಿ ಸ್ವಲ್ಪ ಹುರಿದು, ಮಾಡಿಟ್ಟ ಪುಡಿ, ಹುಣಿಸೆ ರಸ, ಸ್ವಲ್ಪ ಬೆಲ್ಲ, ಉಪ್ಪು ಹಾಕಿ ಕಲೆಸಿ, ಬೇಯಿಸಿ ತರಕಾರಿ, ಅಕ್ಕಿ ಬೆಂದ ಮೇಲೆ ಬೇಯಿಸಿದ ಬೇಳೆ ಸ್ವಲ್ಪ ನೀರು ಹಾಕಿ ಕುದಿಸಿ. ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಕರಿಬೇವು, ಇಂಗು, ಗೋಡಂಬಿ ಹಾಕಿ ಬೆಂದ ಅಕ್ಕಿ, ಬೇಳೆ ಮಿಶ್ರಣಕ್ಕೆ ಹಾಕಿದರೆ ರುಚಿಯಾದ ಬಿಸಿ ಬೇಳೆ ಬಾತ್ ಸಿದ್ಧ!