ಬಿಸಿ ನೀರಿನ ಲಾಭ

ಪ್ರತಿದಿನ ಬ್ರಷ್ ಮಾಡಿದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಗ್ಲಾಸ್ ಬಿಸಿ ನೀರು ಕುಡಿಯುವುದರಿಂದ ಜೀರ್ಣ ಸಂಭಂಧಿತ ಸಮಸ್ಯೆಗಳು ಇರುವುದಿಲ್ಲ, ಒಂದುವೇಳೆ ಏನಾದರೂ ಸಮಸ್ಯೆ ಇದ್ದರೂ ಕೂಡ ತೊಲಗಿ ಹೋಗುತ್ತೆ. ಹಾಗೇ ಮಲಬದ್ಧತೆ, ಪೈಲ್ಸ್ ನಂತಹ ಸಮಸ್ಯೆಗಳು ಸಹ ದೂರ ಆಗುತ್ತದೆ ಮುಖ್ಯವಾಗಿ ಶರೀರದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗತ್ತೆ ಹಾಗೆ ಶರೀರದ ಕೊಬ್ಬನ್ನು ಕಡಿಮೆ ಮಾಡಿಕೊಂಡು ಬೇಗನೆ ತೂಕವನ್ನು ಸಹ ಇಳಿಸಿಕೊಳ್ಳಬಹುದು, ನೆಗಡಿ ಜ್ವರದಂತಹ ಸಮಸ್ಯೆಯಿಂದ ಸಹ ದೂರ ಇರಬಹುದು ಶರೀರದಲ್ಲಿ ಇರುವಂತಹ ಅವಯವಗಳು ಕೂಡ ತುಂಬಾ ಆರೋಗ್ಯವಾಗಿ ಇರತ್ತೆ ಕೆಮ್ಮು ನೆಗಡಿ ಗಂಟಲು ನೋವು ಅಸ್ತಮಾ ಸಮಸ್ಯೆಗಳಿಂದ ಸಹ ದೂರ ಇರಬಹುದು.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನೀರನ್ನು ಕುಡಿಯುವಾಗ ಹೆಚ್ಚು ಕುದಿಸಿ ಕೊಳ್ಳದೆ ಒಂದು ಲೋಟದಷ್ಟು ನೀರನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ, ಕಾಫಿ ಟೀ ಎಷ್ಟು ಬಿಸಿಯಾಗಿ ಕುಡಿತೀರಾ ಅಷ್ಟು ಬಿಸಿನೀರನ್ನು ಕುಡಿದರೆ ಸಾಕು ಸಾಧ್ಯವಾದರೆ ಒಂದು ಲೋಟ ಬಿಸಿ ನೀರಿಗೆ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಿಂದ ನಿಮಗೆ ಹೈಪರೇಸಿಡಿಟಿ ಮಲಬದ್ಧತೆ ಅಂತ ಸಮಸ್ಯೆಗಳು ದೂರವಾಗುತ್ತದೆ ಈ ರೀತಿ ಉಗುರು ಬೆಚ್ಚಗಿನ ನೀರನ್ನು ಯಾರು ಬೇಕಿದ್ದರೂ ಕುಡಿಯಬಹುದು ಗರ್ಭಿಣಿಯರು ಕೂಡ ಕುಡಿಯಬಹುದು ಶರೀರದಲ್ಲಿ ನೋವು ಇದ್ದವರು ಪ್ರತೀ ದಿನ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು ಹಾಗೆ ನೋವು ಕೂಡ ಕಡಿಮೆ ಆಗತ್ತೆ ತುಳಸಿ ಎಲೆಯನ್ನು ಬೀಸಿ ನೀರಿಗೆ ಹಾಕಿ ಐದು ನಿಮಿಷ ಬಿಟ್ಟು ಕುಡಿಯುವುದು ತುಂಬಾ ಒಳ್ಳೆಯದು ಬೀಸಿ ನೀರನ್ನು ಕುಡಿಯುವುದರಿಂದ ಮುಖದಲಿನ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಬೀಸಿ ನೀರು ಕುಡಿಯುವುದರಿಂದ ಬೆವರು ಬೇಗ ಹೊರಗಡೆ ಬರತ್ತೆ ಇದರಿಂದ ದೇಹದ ಕೊಬ್ಬು ಕೂಡ ಬೇಗ ಕರಗತ್ತೆ ಹಾಗಾಗಿ ಎಲ್ಲರೂ ಪ್ರತಿ ದಿನ ಬೆಳಗ್ಗೆ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ.