ಬಿಸಿ ಊಟ ನಿರ್ವಹಣೆ ಮಾಡುವಲ್ಲಿ ವಿಫಲ,ವರ್ಗಾವಣೆ ಆಗ್ರಹ

ರಾಯಚೂರು,ಜ.೧೧- ರಾಯಚೂರು ತಾಲೂಕಿನ ದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ್. ಎಂ. ರಮೇಶ್ ರಾಠೋಡ್ ಇವರು ಸರಿಯಾಗಿ ಬಿಸಿ ಊಟ ನಿರ್ವಹಣೆ ಮಾಡದೆ ಅವ್ಯವಹಾರದಲ್ಲಿ ಭಾಗಿಯಾಗಿದ್ದು ಕೂಡಲೇ ಇವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಎಂ ಸಿ ಅಧ್ಯಕ್ಷ ಕೆ ವೆಂಕಟೇಶ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ್. ಎಂ. ರಮೇಶ್ ರಾಠೋಡ್ ಇವರು ಮಕ್ಕಳಿಗೆ ಬಡಿಸುವ ಬಿಸಿ ಊಟ ಸರಿಯಾಗಿ ನಡೆಸದೆ ಬಾರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬಿಸಿ ಊಟದ ಕುರಿತು ಲೆಕ್ಕಪತ್ರವನ್ನು ಕೇಳಿದರೆ ಈ ವಿಷಯದ ಬಗ್ಗೆ ನಿಮಗೆ ಕೇಳೋಕೆ ಅಧಿಕಾರವಿಲ್ಲ ಎಂದು ಹೇಳುತ್ತಿದ್ದಾರೆ. ಇವರು ವಿದ್ಯಾರ್ಥಿಗಳಿಗೆ ಸೂಕ್ತವಾದ ಶಿಕ್ಷಣವನ್ನು ನೀಡಲು ವಿಫಲರಾಗಿದ್ದಾರೆ. ಕೂಡಲೇ ಇವರನ್ನು ವರ್ಗಾವಣೆ ಮಾಡಿ ಬೇರೆ ಮುಖ್ಯೋಪಾಧ್ಯಾಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನರಸಪ್ಪ,ವೆಂಕಟೇಶ್ ನಾಯಕ ಇದ್ದರು.