ಬಿಸಿಸಿಐ ಆಯೋಜಿಸಲಾದ ಮಹಿಳಾ ಅಂಡರ್ 19 ಗೆ ಜಿಲ್ಲೆ ಇಬ್ಬರು ಆಯ್ಕೆ

ವಿಜಯಪುರ, ಸೆ.22- ಭಾರತ ಕ್ರಿಕೇಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಲಾಗಿರುವ 19 ವರ್ಷದೊಳಗಿನ ಮಹಿಳೆಯರ ಏಕ ದಿನ ಕ್ರಿಕೆಟ್ ಟ್ರೋಪಿ ಟೂರ್ನಿಗೆ ವಿಜಯಪುರದ ಯಲಗೂರೇಶ್ವರ ವ್ಹಿ. ವ್ಹಿ. ಸಂಘದ ಅಧೀನದಲ್ಲಿ ನಡೆಯುತ್ತಿರುವ ಎಸ್.ವೈ. ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಕುಮಾರಿ ಅನ್ನಪೂರ್ಣ ಭೋಸಲೆ ಹಾಗೂ ಕಾಶೀನಾಥ ಸಮಗೆಂಡ ಶಿಕ್ಷಕರು ಹಾಗೂ ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್‍ಷಕಿ ಶ್ರೀಮತಿ ದ್ರಾಕ್ಷಾಯಿಣಿ ಚಾಳಿಕಾರ ದಂಪತಿ ಪುತ್ರಿಯಾದ ಅನುಶ್ರೀ ಕಾ. ಸಮಗೊಂಡ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇವರ ಆಯ್ಕೆಯ ಹಿನ್ನೆಲೆ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಎಚ್. ಜಿ. ತೊನಶ್ಯಾಳ, ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ಪ್ರಾಚಾರ್ಯರಾದ ಶ್ರೀ ಎಸ್.ಐ. ಜಾವಡಗಿ, ಮುಖ್ಯ ಗುರುಗಳಾದ ವಿ.ಜಿ. ವಪ್ಪಾರಿ, ಶೋಭಾ ಪಾಟೀಲ್, ಶಿವಾನಂದ ಹಿರೇಕುರಬರ, ವ್ಹಿ.ಎಸ್. ಸಜ್ಜನ ಅಭಿನಂದಿಸಿದ್ದಾರೆ.