ಬಿಸಿಲ ಬೇಗೆ : ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ

ದಾವಣಗೆರೆ, ಮಾ. 12: ವರ್ಷದಿಂದ ವರ್ಷಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಾ ಬರುತ್ತಿದೆ. ನಾವು ಮಾತನಾಡಲು ಬರುವವರು ನೀರನ್ನು ಕೇಳಿ ಪಡೆದು ಕುಡಿಯುತ್ತೇವೆ. ಆದರೆ ಹಸು, ಕರು, ಪಕ್ಷಿ, ಪ್ರಾಣಿ ಪಕ್ಷಿಗಳು, ಗಿಡ-ಮರಗಳು ಯಾರನ್ನು ಕೇಳಬೇಕು.ಮಾನವೀಯತೆಯ ದೃಷ್ಟಿಯಿಂದ ದಯವಿಟ್ಟು ಪ್ರತಿಯೊಬ್ಬ ನಾಗರೀಕರೂ ಸಹಾ ತಮ್ಮ ಮನೆ ಮೇಲೆ, ಕಾಂಪೌAಡ್‌ನಲ್ಲಿ ಮರದ ಕೊಂಬೆಗಳ ಮೇಲೆ ನೀರಿನ ಮಡಿಕೆ, ಬಾಟಲ್‌ಗಳನ್ನು ಇಟ್ಟು ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಸಹಕಾರಿಯಾಗಿರಿ ಎಂದು ದಾವಣಗೆರೆ ತಾ.ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘದ ಅಧ್ಯಕ್ಷ, ಕನ್ನಡ ಸಮರ ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಎಂ.ಮನು ಮನವಿ ಮಾಡಿದ್ದಾರೆ.ಹಾಗೆಯೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿನ ರಸ್ತೆ ಅಕ್ಕಪಕ್ಕದಲ್ಲಿರುವ ಗಿಡ ಮರಗಳಿಗೆ ಪ್ರತಿದಿನ ಇನ್ನೂ ಹೆಚ್ಚಿನದಾಗಿ ನೀರುಣಿಸಿದರೆ ಗಿಡ-ಮರಗಳು ಹಸಿರಾಗಿ ಉಳಿಯುತ್ತವೆ. ಇದರಿಂದ ಆಮ್ಲಜನಕ ಪಡೆಯಲು ಅನುಕೂಲವಾಗುತ್ತದೆ. ಪರಿಸರವನ್ನು ಕಾಪಾಡಿದಂತಾಗುತ್ತದೆ. ಹಾಗೂ ಯಾವುದೇ ರೋಗ ರುಜಿನೆಗಳು ಹರಡುವುದಿಲ್ಲ. ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.