ಬಿಸಿಲ ಝಳಕ್ಕೆ ಕುಸಿದು ಬಿದ್ದ ಸಿದ್ದು

ಬಳ್ಳಾರಿ, ಏ. ೨೯- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೈದಾನದಲ್ಲಿ ಇಂದು ಚುನಾವಣಾ ಪ್ರಚಾರಕ್ಕೆ ಬಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಘಟನೆ ನಡೆಯಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೆಲಿಕಾಫ್ಟರ್ ನಿಂದ ಬಂದಿಳಿದು ಕಾರು ಹತ್ತುವ ಮುನ್ನ ಕಾರು ಏರಿ ಜನರತ್ತ ಕೈ ಬೀಸುವ ವೇಳೆಗೆ ಅವರ ದೇಹ ನಡುಗುತ್ತಿತ್ತು. ಆದರೂ ಸಾವಕಾಶವಾಗಿ ಕೈ ಬೀಸಿ ಕಾರಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಹಠಾತ್ತನೆ ಕುಸಿದು ಬಿದ್ದರು. ತಕ್ಷಣ ಕಾಂಗ್ರೆಸ್ ಅಭ್ಯರ್ಥಿ ಡಾ.ಶ್ರೀನಿವಾಸ ಬೊಮ್ಮಣ್ಣ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಗ್ಲೂಕೋಸ್ ಕೊಟ್ಟ ಮೇಲೆ ಸುಧಾರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದರು.ಈ ವೇಳೆ ಸಿದ್ದರಾಮಯ್ಯ ಅವರ ಕೈಗೆ ಒಂದಿಷ್ಟು ತರಚಿದ ಗಾಯಗಳಾಗಿವೆ ಎಂದು ಹೇಳಲಾಗಿದೆ.