ಬಿಸಿಲು ನಗರಿಯಲ್ಲಿ ಬಿಜೆಪಿಯ ಲಿಂಗರಾಜ ಕೋಟೆ ಮಿಂಚು

ಬಿಜೆಪಿ ಟಿಕೆಟ್ ನೀಡಿದರೆ ಗೆಲುವು ಖಚಿತ
ಸಂಜೆವಾಣಿ -ದುರುಗಪ್ಪ ಹೊಸಮನಿ
ಲಿಂಗಸೂಗೂರು ಮಾ ೨೫
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಲಿಂಗರಾಜ ಕೋಟೆಯವರು ರಾಜಕೀಯ ಮುಖಂಡರು,ವಕೀಲರು, ಜನಪರ ಕಾಳಜಿಯುಳ್ಳ ನಾಯಕರಾಗಿದ್ದಾರೆ,ಈ ಬಾರಿ ಎಸ್ ಸಿ ಮೀಸಲು ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ, ಟಿಕೆಟ್ ನೀಡಿದರೆ ಇವರ ಗೆಲುವು ನಿಶ್ಚಯ ಎಂದು ಕ್ಷೇತ್ರದ ಅನೇಕ ಜನರ ಅಭಿಪ್ರಾಯವಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ ೧೪೦ಹಳ್ಳಿಗಳಲ್ಲಿ ಸಂಚರಿಸುವ ಮುಖಾಂತರ ಜನರ ಮನಸ್ಸಿನಲ್ಲಿ ಹಚ್ಚ ಹಸುರಿನ ಯುವಕನಾಗಿ ಹೊರಹೊಮ್ಮಿರುವ ಲಿಂಗರಾಜ ಕೋಟೆಯವರು ಪ್ರಾಮಾಣಿಕತೆಯಿಂದ ಬಿಜೆಪಿ ಪಕ್ಷದ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತಾ ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ಮತದಾರರ ಮನವೊಲಿಸಲು ಅನೇಕ ರಾಜಕೀಯ ತಂತ್ರಗಾರಿಕೆ ಬಳಸಿ ಬಿಜೆಪಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ.
ಲಿಂಗರಾಜ ಕೋಟೆ ವಕೀಲರು ಇವರ ಹಿಂದೆ ಅವರ ಸಮುದಾಯವಿದೆ ಹಾಗೂ ಕೋಟೆಯವರು ಎಲ್ಲಾ ಸಮಾಜದವರನ್ನು ಸಮಾನತೆಯಿಂದ ಕಾಣುವ ವ್ಯಕ್ತಿತ್ವ ಅವರದ್ದಾಗಿದೆ, ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವುದರಿಂದ ಸಹಜವಾಗಿ ಅವರಿಗೆ ಕೇಂದ್ರ ಹಾಗೂ ರಾಜ್ಯ ಮುಖಂಡರು ನಿಕಟ ಸಂಬಂಧವಿದೆ..
ಲಿಂಗರಾಜ ಕೋಟೆ ಇವರು ಸರಳ ಸಜ್ಜನಿಕೆಯ ನಡೆಯ ವ್ಯಕ್ತಿ ಇವರು ಆಡಂಬರಕ್ಕೆ ಬೆಲೆ ನೀಡದೆ ಬಡ ಬಗ್ಗರಿಗೆ ಸ್ಪಂದಿಸುವ ಗುಣ ಇವರಲ್ಲಿ ಕಾಣಬಹುದು.
ಕೋಟೆ ಇವರ ಪೋಷಕರ ಹಿನ್ನೆಲೆ ನೋಡಿದರೆ ಇವರು ಅಪ್ಪಟ ರಾಜಕೀಯ ಕುಟುಂಬದಿಂದ ಬಂದ ನಾಯಕರು ಇವರ ತಂದೆ ೧೯೯೪ ರಲ್ಲಿ ದೇವದುರ್ಗದ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವ ಗೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ ಪಕ್ಷವನ್ನು ಬಲಪಡಿಸುವ ಕೆಲಸ ಇವರ ತಂದೆ ಮಾಡಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ ಅದಕ್ಕಾಗಿ ಇವರು ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಮಧ್ಯೆ ಚಿರಪರಿಚಿತರಾಗಿದ್ದಾರೆ.
ಲಿಂಗರಾಜ ಕೋಟೆಯವರಿಗೆ ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡಬೇಕು ಎಂಬುದು ಕ್ಷೇತ್ರದ ಅನೇಕರ ಬಯಕೆಯಾಗಿದೆ.

ಬಾಕ್ಸ್
ಬಿಜೆಪಿ ಪಕ್ಷಕ್ಕಾಗಿ ನಿಷ್ಟಾವಂತ ನಾಯಕ
ಲಿಂಗರಾಜ ಕೋಟೆ ಇವರ ಪ್ರಮುಖ
ಸಮಸ್ಯೆಗಳನ್ನು ಗುರುತಿಸಿ ಸೂಕ್ತ ವಿಶ್ಲೇಷಣೆಯೊಂದಿಗೆ ಪರಿಹಾರಕ್ಕಾಗಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯ ಸಾಮರ್ಥ್ಯ ಹೊಂದಿರುವ ನಾಯಕ ಲಿಂಗಸುಗೂರ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಮಾಡಿದರೆ ಮಾದಿಗ ಎಡಗೈ ಸಮುದಾಯಕ್ಕೆ ಜೀವ ಬಂದಂತೆ ಆಗುತ್ತದೆ ಎಂದು ಕ್ಷೇತ್ರದ ಜನತೆಯ ಅಭಿಲಾಷೆಯಾಗಿದೆ.

ಬಾಕ್ಸ್
ಲಿಂಗರಾಜ ಕೋಟೆ ಬೆನ್ನಿಗೆ ನಿಂತ ಬಿಜೆಪಿ ಮುಖಂಡರು.
ಮಾದಿಗ ಸಮಾಜದ ರಾಜ್ಯ ನಾಯಕರ ಬೆಂಬಲ ಪಡೆದುಕೊಂಡು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷಕ್ಕೆ ಚೈತನ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ಲಿಂಗರಾಜ ಕೋಟೆ ವಕೀಲರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ಘೋಷಣೆ ಆದರೆ ಅಚ್ಚರಿಪಡಬೇಕಿಲ್ಲ
ಲಿಂಗರಾಜ ಇವರಿಗೆ ರಾಜಕೀಯ ಅನುಭವವೂ ಇದೆ ಹಾಗೂ ಲಿಂಗರಾಜ ರವರ ಆತ್ಮಸ್ಥೈರ್ಯ ಯನ್ನು ಹೆಚ್ಚಿಸುವ ಮೂಲಕ ರಾಜ್ಯ ನಾಯಕರು ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ.