ಬಿಸಿಲಿನ ತಾಪವನ್ನು ಕಡಿಮೆಯಗಲು ಗಿಡ, ಮರಗಳನ್ನು ಪೆÇೀಷಿಸಿ: ಕುಮಾರಸ್ವಾಮಿ

ಸಂಜೆವಾಣಿ ವಾರ್ತೆ
ಚಾಮರಾಜನಗರ ಫೆ 23 :- ಬಿಸಿನ ತಾಪವನ್ನು ಕಡಿಮೆಯಗಲು ಗಿಡ,ಮರಗಳನ್ನು ಪೆÇೀಶಿಸಿ ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾಶಾಖೆಯ ಅಧ್ಯಕ್ಷ-ಹೆಚ್.ಜಿ.ಕುಮಾರ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಮುಖ್ಯ ರಸ್ತೆಯಲ್ಲಿ ನೆಡಲಾಗಿರುವ ಸಾಲು ಗಿಡಗಳಿಗೆ ನೀರಾಕುವ ಮೂಲಕ ಮಾತನಾಡಿದರು ಪರಿಸರ ಪ್ರೇಮಿ ಹಾಗೂ ಸಾಲು ಮರದ ಸಿ.ಎಂ.ವೆಂಕಟೇಶ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸಾಲು ಗಿಡಗಳಿಗೆ ನೀರು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಪ್ರತಿಯೊಬ್ಬರು ತಮ್ಮಗಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತು ಜಯಂತಿ ಕಾರ್ಯಕ್ರಮಗಳ ಅಂಗವಾಗಿ ಗಿಡಗಳನ್ನು ಪೆÇೀಶಿಸುವ ಕಾರ್ಯಕ್ಕೆ ಮುಂದಾಗಬೇಕು, ನೀವು ಬೆಳಿಸಿದ ಗಿಡ,ಮರ ನಿಮಗೆ ತಾಪಮಾನವನ್ನು ಕಡಿಮೆ ಮಾಡಿ ತಂಪವನ್ನು ನೀಡುತ್ತದೆ ಎಂದು ಹೇಳಿದರು.
ಮುಖ್ಯ ಯೋಗ ಶಿಕ್ಷಕರಾದ ನಿಜಗುಣನಾಗೇಂದ್ರ ಅವರು ಮಾತನಾಡಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಿ.ಎಂ. ವೆಂಕಟೇಶ್ ಅವರು ಅವಿರತ ಶ್ರಮದಿಂದ ಚಾಮರಾಜನಗರ ಜಿಲ್ಲಾಧ್ಯಂತ ಸಾಲು ಗಿಡಗಳನ್ನು ನೆಟ್ಟು ಪೆÇೀಶಿಸುತ್ತಿದ್ದಾರೆ.
ಅವರೊಂದಿಗೆ ಎಲ್ಲರೂ ಕೈ ಜೋಡಿಸಿದರೆ ಮುಂದೊಂದು ದಿನ ಚಾಮರಾಜನಗರ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿ ಪರಿರ್ವತಿಸ ಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಜಯಲಕ್ಷಿ?ಮ, ಲೋಕೇಶ್, ಮಹದೇವು, ರೇಣುಕ, ಶೋಭ, ಸುಕನ್ಯ, ಜಯರತ್ನ, ಶುಭ, ಕೋಕಿಲ, ಪರಿಮಳ, ಹೇಮ, ಸರಸುಮಣಿ, ದ್ರಾಕ್ಷಾಯಣಿ, ಉಮಾ, ಇನ್ನಿತರರು ಇದ್ದರು