ಬಿಸಿಲಿನ ತಾಪಮಾನಕ್ಕೂ ಕ್ಯಾರೇ ಎನ್ನದ ಚುನಾವಣಾಧಿಕಾರಿಗಳು

ಚಿಂಚೋಳಿ,ಏ.4- ತಾಲೂಕಿನ ಗಡಿಭಾಗದ ಶಿವರಾಮಪೂರ ಗ್ರಾಮದ ಚೆಕ್ ಪೆÇೀಸ್ಟ್ ನಲ್ಲಿ 2024ನೇ ಲೋಕಸಭೆ ಚುನಾವಣೆಯ ನಿಮಿತ್ಯ ಚೆಕ್ ಪೆÇೀಸ್ಟ ನಲ್ಲಿ ಬಿಸಿಲಿಗೆ ಕ್ಯಾರೇ ಎನ್ನದೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ
ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಅಂತಾರಾಜ್ಯ ಗಡಿಯಲ್ಲಿ ಚೆಕ್‍ಪೆÇೀಸ್ಟ್ ತೆರೆಯಲಾಗಿದ್ದು ತೆಲಂಗಾಣದ ಜಹೀರಬಾದ ಹೋಗುವ ಮುಖ್ಯರಸ್ತೆಯ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲ್ಲಾ ವಾಹನಗಳಿಗೆ ಚೆಕ್ ಪೆÇೀಸ್ಟ್ ನಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ.
ಚೆಕ್ ಪೆÇೀಸ್ಟ್ ಮೂಲಕ ಸಾಗುವ ಪ್ರತಿ ವಾಹನವನ್ನು ತಡೆದು ತಪಾಸಣೆ ಮಾಡಲಾಗುತ್ತಿದ್ದೂ
ಸಂಚರಿಸುವ ವಾಹನಗಳ ಮೇಲೆ ನಿರಂತರ ನಿಗಾವಹಿಸುತ್ತಿರುವುದು ಕಂಡುಬಂದಿದೆ
ಚಿಂಚೋಳಿಯ ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಾದ ಪ್ರಭುಲಿಂಗ, ಮತ್ತು ಪಂಚಾಯತ್ ಇಲಾಖೆಯ ಸಿಬಂದಿ, ಪೆÇಲೀಸ್ ಮತ್ತು ಗೃಹ ರಕ್ಷಣೆ ಸಿಬಂದಿಗಳು ಇದ್ದರು