ಬಿಸಿಲಿನ ತಾಪದಿಂದ ಹದ ತಪ್ಪಿ ಬರುತ್ತಿರುವ ಮಳೆ


ಸಂಜೆವಾಣಿ ವಾರ್ತೆ
ಸಂಡೂರು :ಜು:6  ಅರಣ್ಯ ನಾಶದಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ ಹದ ತಪ್ಪಿ ಮಳೆ ಬರುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ರವಿ ಹೇಳಿದರು.
ತಾಲೂಕಿನ ಚೋರುನೂರು ಹೋಬಳಿ ವಡ್ಡಿನಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ವನಮಹೋತ್ಸವ ಉದ್ದೇಶಿಸಿ ಬುಧವಾರ ಮಾತನಾಡಿದರು.
ಗಿಡ-ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು ಇರುವ ಅರಣ್ಯದೊಂದಿಗೆ ಈ ಮರಗಿಡಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಮಹಬ್ಬಾಷ, ಶಾಲೆಯ ಪ್ರಾಂಶುಪಾಲ ಸಿ.ಶಂಕ್ರರಪ್ಪ ಮಾತನಾಡಿದರು.
ಚೋರುನೂರು ಗ್ರಾಪಂ ಲಲಿತಮ್ಮ ಮಾರೆಪ್ಪ, ಸದಸ್ಯ ಶ್ರೀನಿವಾಸ, ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಯಾದವ್, ಅರಣ್ಯ ರಕ್ಷಕ ಗಂಗಾಧರ, ನಿಲಯ ಪಾಲಕ ಹಡಪದ ಕೃಷ್ಣಪ್ಪ, ಶಿಕ್ಷಕರಾದ ಕೆ.ರಮೇಶ್,
ಎಸ್‍ಎಸ್‍ಎಂ.ಸುನೀತ, ಬಿ.ಸುಲೋಚನ, ಎನ್.ಎಂ.ಕುಮಾರಸ್ವಾಮಿ, ಜೆ.ರಾಜ, ಕೆ.ಎಂ.ಕಾರ್ತಿಕೇಶ, ದೈಹಿಕ ಶಿಕ್ಷಕ ಬಿ.ಎನ್.ಕಸ್ತೂರಿನಾಯಕ, ಪ್ರಥಮ ದರ್ಜೆ ಸಹಾಯಕಿ ಎಚ್.ಆಶಾಭೀ, ಶುಶ್ರೂಷಕಿ ಜೆ.ಸಿ.ಮಂಜುಳ ಇತರರಿದ್ದರು.
5-ಸಂಡೂರು-3-ಸಂಡೂರು ತಾಲೂಕಿನ ಚೋರುನೂರು ಹೋಬಳಿ ವಡ್ಡಿನಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ವನಮಹೋತ್ಸವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ರವಿ ಬುಧವಾರ ಗಿಡ ನೆಟ್ಟರು.