ಬಿಸಿಲಿನ ತಾಪಕ್ಕೆ ಮೊಸಳೆ ಸಾವು

ರಾಯಚೂರು.ಏ.೨೯- ನೀರಿಲ್ಲದೇ ಕೃಷ್ಣ ನದಿ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಮೊಸಳೆಯೊಂದು ಸಾವನಪ್ಪಿದ ಘಟನೆ ತಾಲೂಕಿನ ಕುರ್ವಕುಲ ಗ್ರಾಮದ ಸಮೀಪದ ಕೃಷ್ಣ ನದಿಯಲ್ಲಿ ನಡೆದಿದೆ.
ಕಲ್ಲು ಬಂಡೆಯ ಮೇಲೆ ಮೃತ ಮೊಸಳೆಯು ಪತ್ತೆಯಾಗಿದೆ. ಕೃಷ್ಣ ನದಿಯಲ್ಲಿ ನೀರಿನಲ್ಲದೆ ಸಂಪೂರ್ಣವಾಗಿ ನದಿ ಬತ್ತಿ ಹೋಗಿದೆ, ಈ ಹಿನ್ನೆಯಲ್ಲಿ ನದಿಯ ಲ್ಲಿದ್ದ ಜಲಚರಗಳು ನೀರಿಲ್ಲದೇ ಸಾವನ್ನಪ್ಪುತ್ತಿವೆ ಉಳಿದಂತೆ ನೀರಿನಲ್ಲದೆ ಸಾಕಷ್ಟು ಮೀನುಗಳು ಸಹ ಸಾವನಪ್ಪಿವೆ ಜಿಲ್ಲಾಡಳಿತ ಕೃಷ್ಣ ನದಿಗೆ ನೀರು ಹರಿಸಲು ಮುಂದಾಗಿಬೇಕು, ನೀರಿಲ್ಲದೆ ಜಲಚರಗಳ ಸಂಪೂರ್ಣವಾಗಿ ಸಾವನಪ್ಪಲಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.