ಬಿಸಿಲಿಗೆ ಜನ ಹೈರಾಣ: ಬಿಸಿ ಗಾಳಿಯ ಎಚ್ಚರಿಕೆ

ಬೆಂಗಳೂರು.ಏ.೨-ಒಂದು ಹನಿಯೂ ಮಳೆ ಬೀಳದ ಪರಿಣಾಮ ಅಂತರ್ಜಲ ಕುಸಿತ ಕಂಡಿದ್ದು ಬೆಂಗಳೂರಿನ ನಾಗರಿಕರು ನೀರಿಗಾಗಿ ಪರದಾಡುತ್ತಿದ್ದಾರೆ.
ಯಾವಗಲೂ ತಂಪಾಗಿರುರುತ್ತಿದ್ದ ಸಿಲಿಕಾನ್ ಸಿಟಿ ಈ ಬೇಸಿಗೆಯಲ್ಲಿ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗಿದೆ. ನಗರದ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕೆಲ ವರ್ಷಗಳಿಂದ ಬೆಂಗಳೂರಲ್ಲಿ ೩೫ ಡಿಗ್ರಿ ಉಷ್ಣ ಮೀರಿರಲಿಲ್ಲ. ಆದ್ರೆ ಈ ಬಾರಿ ೪೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಸಮೀಪಕ್ಕೆ ಸಾಗಿರುವುದು.
ಜನರನ್ನ ಚಿಂತೆಗೀಡು ಮಾಡಿದೆ.ಮಳೆ ಈಗ ಆಗುತ್ತೆ ಆಮೇಲೆ ಆಗುತ್ತೆ ಎಂದು ಕಾದಿದ್ದೆ ಆಯ್ತು. ಮಳೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಒಂದು ಹನಿಯೂ ಮಳೆ ಬಿದ್ದಿಲ್ಲ.
ಕಳೆದ ೮ ವರ್ಷಗಳಲ್ಲಿ ಬೆಂಗಳೂರು ಎರಡನೆ ಬಾರಿಗೆ ಗರಿಷ್ಠ ಉಷ್ಣಾಂಶ ಕಂಡಿದೆ. ೨೦೧೬ರಲ್ಲಿ ೩೯.೨ ಡಿಗ್ರಿಸೆಲ್ಸಿಯಸ್, ೧೯೯೬ರಲ್ಲಿ ೩೭.೩ ಡಿಗ್ರಿಸೆಲ್ಸಿಯಸ್, ೨೦೧೭ರಲ್ಲಿ ೩೭.೨ ಡಿಗ್ರಿಸರಲ್ಸಿಯಸ್ ದಾಖಲಾಗಿದ್ದು ಇದು ಈವರೆಗಿನ ಗರಿಷ್ಠ ತಾಪಮಾನ ಎಂದು ಹೇಳಲಾಗುತ್ತಿದೆ.
ಮುಂದಿನ ಒಂದು ವಾರದಲ್ಲಿ ಮತ್ತೆ ಬಿಸಿ ಗಾಳಿ ಬೀಸಲಿದೆ. ಕಳೆದ ೧೫ ದಿನಗಳಲ್ಲಿ ೩೩ರಿಂದ ೩೯ ಡಿಗ್ರಿ ಸೆಲ್ಸಿಯವರೆಗೆ ತಾಪಮಾನ ಕಂಡಿದೆ. ಇನ್ನಷ್ಟು ತಾಪಮಾನ ಏರಿಕೆ ಕಾಣುವ ಧ್ಯತೆ ಇದೆ ಎಂದು ಬೆಂಗಳೂರು ಹವಾಮಾನದ ಕೇಂದ್ರದ ವಿಜ್ಞಾನಿ ಡಾ.ಎಂ.ರಾಜವೇಲ್ ಎಚ್ಚರಿಸಿದ್ದಾರೆ.
ಬೆಂಗಳೂರು ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ತುಮಕೂರು, ಚಿತ್ರದುರ್ಗ, ದಾವಣೆಗೆರೆ, ವಿಜಯನಗರ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಕಲಬುರಗಿ, ಬೀದರ್, ದ,ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ.