ಬಿಸಿಲಿಗೆ ಕರಗಿದ ಲೂಪ್ ಲೈನ್

ಲಕ್ನೋ, ಜೂ.೧೯-ಉತ್ತರ ಪ್ರದೇಶದಲ್ಲಿ ಬಿಸಿಲಿನ ಝಳಕ್ಕೆ ಉತ್ತರ ಪ್ರದೇಶದ ನಿಗೊಹಾನ್ ರೈಲ್ವೆ ನಿಲ್ದಾಣದ ಲೂಪ್ ಲೈನ್ ಕರಗಿ ಬೆಂಡಾಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ರೈಲು ದುರಂತವೊಂದು ತಪ್ಪಿದೆ.

ಶನಿವಾರ ಸಂಜೆ ನಿಲಾಂಚಲ್ ಎಕ್ಸ್ ಪ್ರೆಸ್ ರೈಲ್ವೆ ಹಳಿಗಳು ಬಿಸಿಲಿನಿಂದ ಬೆಂಡಾಗಿರುವ ಹಿನ್ನೆಲೆಯಲ್ಲಿ ಲೂಪ್ ಲೈನ್ ಬದಲು ಪ್ರಮುಖ ಹಳಿಯಲ್ಲೇ ಸಂಚರಿಸಬೇಕಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ, ಹಳಿಗಳ ನಡುವೆ ಜೋಡಣೆಯಲ್ಲೂ ಬಿರುಕು ಕಂಡು ಬಂದಿದ್ದು, ಲೊಕೊಮೋಟಿವ್ ಪೈಲೆಟ್ ಕೂಡಲೇ ರೈಲನ್ನು ತಡೆದು ನಿಲ್ಲಿಸಿದ್ದು, ಕಂಟ್ರೋಲ್ ರೂಮ್ ಸಂಪರ್ಕಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗ ಕೂಡಲೇ ರೈಲು ಹಳಿಗಳಲ್ಲಿನ ದೋಷ ಪತ್ತೆ ಹಚ್ಚಿ ದುರಸ್ತಿಗೊಳಿಸಿದ್ದಾರೆ.

ಲಕ್ನೋ ಜಂಕ್ಷನ್ ತಲುಪಿದ ರೈಲು ಪೈಲೆಟ್ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ಈ ವಿಷಯ ಗಮನಕ್ಕೆ ತಂದಿದ್ದಾರೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಳಾದ ರೈಲ್ವೆ ಹಳಿಗಳನ್ನು ಗಮನಿಸಿ ದುರಸ್ತಿಗೆ ಕೂಡಲೇ ಕ್ರಮ ಕೈಗೊಂಡಿದ್ದಾರೆ.