ಬಿಸಿಲಲ್ಲವೋ ಇದು ಬರೀ ಎಲೆಕ್ಷನ್ ಬಿಸಿಲು

ಆಳಂದ: ಎ.21:ಒಂದಡೆ ಬೇಸಿಗೆ ವಿಪರೀತ ಬಿಸಿಲು ಲೆಕ್ಕಿಸದೆ, ಮತ್ತೊಂದಡೆ ಚುನಾವಣೆ ಪ್ರಚಾರಕ್ಕೆ ದುಮುಕಿದ ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರು ಎಡಬಿಡದೆ ಪ್ರಚಾರದಲ್ಲಿ ತೊಡಗಿ ಮತದಾರರನ್ನು ಹುಡಕಿ ಮತ ನೀಡುವಂತೆ ಮನವೊಲಿಸತೊಡಗಿದ್ದಾರೆ.

ಬಹುತೇಕ ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ, ಅವರು ಕಾರ್ಯಕರ್ತರ ಮುಂದೆ ಹೇಳಿಕೊಂಡಂತೆ ಇದು ಚುನಾವಣೆಯ ಕೊನೆಯ ಕದನವಾದರೆ, ಇದೇ ಮೊದಲು ಬಾರಿಗೆ ಚುನಾವಣೆ ಕಣಕ್ಕೆ ದುಮಕಿರುವ ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ ಸಡ್ಡು ಹೊಡೆದು ಬಿರುಸಿನ ಪ್ರಚಾರ ಗಮನ ಸೆಳೆಯುತ್ತಿದೆ. ಸಿಪಿಐ ಪಕ್ಷದಿಂದ ಮೌಲಾ ಮುಲ್ಲಾ, ಸ್ವತಂತ್ರ ಅಭ್ಯರ್ಥಿಯಾಗಿ ರಮೇಶ ಲೋಹಾರ ಹೀಗೆ ಕೆಲವರು ಉಮೇದುವಾರಿಕೆ ಬಯಸಿದ್ದು ಚುನಾವಣೆ ತೀರುವು ಪಡೆದುಕೊಂಡಿದೆ.

ಈ ಬಾರಿಯ ಕ್ಷೇತ್ರದ ವಿಧಾನಸಭಾ ಚುನಾವಣೆಯು ಬಹು ಕುತೂಹಲದಿಂದ ಕೂಡಿದೆ. ಅಭ್ಯರ್ಥಿಗಳಿಗೆ ಅಗ್ನಿ ಪರೀಕ್ಷೆಯ ಕಾಲವಾಗಿದೆ. ತಮ್ಮ ಸ್ವಂತ ಬಲ ಪ್ರದರ್ಶನ ಮಾಡುವಂತಹ ಕಾಲ ಇದಾಗಿದೆ. ಈ ಬಾರಿ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಹೀಗಾಗಿ ಎಲ್ಲ ಪಕ್ಷದ ಕೇಂದ್ರ ಮತ್ತು ರಾಜ್ಯದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೆಚ್ಚು ಸಮಯ ಕೊಡಲು ಬಹುತೇಕ ಅಸಾಧ್ಯವಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಒತ್ತು ಕೊಟ್ಟರೆ ಅವರು ಗೆಲ್ಲುವುದು ಕಷ್ಟ ಎಂಬಂತಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂವರು ಪಕ್ಷದ ಅಭ್ಯರ್ಥಿಗಳು ಮೊದಲು ಹಂತದಲ್ಲಿ ತಮ್ಮ ತಮ್ಮ ಬಲಪ್ರದರ್ಶನ ಕೈಗೊಂಡಿದ್ದಾರೆ. ಮೊದಲೆಲ್ಲ ರಾಜ್ಯದಲ್ಲಿ ಎರಡ್ಮೂರು ಹಂತಗಳಲ್ಲಿ ಮತದಾನ ಆಗುತ್ತಿತ್ತು. ಆಗ ರಾಜ್ಯ ಮಟ್ಟದ ನಾಯಕರು ಎಲ್ಲ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗವಹಿಸುತ್ತಿದ್ದರು. ಆದಾಗ್ಯೂ, ಈ ಬಾರಿ ಒಂದೇ ಹಂತದ ಮತದಾನ ನಡೆಯುವುದರಿಂದ ಅಭ್ಯರ್ಥಿಗಳೇ ತಮ್ಮ ಪ್ರಚಾರದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಕೊಂಚ ಸಂಕಷ್ಟವಾಗಿದೆ.

ಈ ಬಾರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಪ್ರಚಾರಕ್ಕೆ ಎಷ್ಟರ ಮಟ್ಟಿಗೆ ಬರುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಚುನಾವಣೆ ಘೋಷಣೆಗೆ ಮುನ್ನ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಅಧ್ಯಕ್ಷ ರಾಹುಲ್‍ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸೇರಿದಂತೆ ಅನೇಕ ನಾಯಕರು ಬಂದು ಪ್ರಚಾರ ಮಾಡಿ ಹೋಗಿದ್ದಾರೆ.

ಆದಾಗ್ಯೂ, ಚುನಾವಣೆ ಸಮಯದಲ್ಲಿ ಅವರ ಸೇವೆ ಎಷ್ಟರ ಮಟ್ಟಿಗೆ ಸಿಗುತ್ತದೆ ಎಂಬುದು ಈಗಲೇ ಹೇಳಲಾಗದು. ಎಲ್ಲ ಪ್ರಮುಖ ಪಕ್ಷದವರು ಅಭ್ಯರ್ಥಿಗಳ ಸಾಮಥ್ರ್ಯ ಅಳೆದು ತೂಗಿ ಟಿಕೆಟ್ ನೀಡಿದ್ದು, ಸ್ವಂತ ಬಲದಿಂದ ಯಾರು ಗೆಲ್ಲುತ್ತಾರೋ ಅಂಥವರಿಗೆ ಸ್ಪರ್ಧೆಗೆ ಅವಕಾಶ ನೀಡುತ್ತಿರುವುದು ಕಂಡುಬಂದಿದೆ. ಅದು ಅನಿವಾರ್ಯವೂ ಆಗಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಈ ಕಾರಣದಿಂದಲೇ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಿಲ್ಲ. ಆದಾಗ್ಯೂ, ಬಿಜೆಪಿ ಪಕ್ಷವು ಗೆಲ್ಲುವ ಕುದುರೆಗಳಿಗೆ ಅವಕಾಶ ನೀಡಿದೆ. ಟಿಕೆಟ್ ವಂಚಿತ ಪ್ರಬಲ ವ್ಯಕ್ತಿಗಳನ್ನು ತನ್ನತ್ತ ಸೆಳೆದುಕೊಂಡು ಅವಕಾಶದ ಸದುಪಯೋಗ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂಚು ಹಾಕಿವೆ. ಇವೆಲ್ಲ ತಂತ್ರಗಾರಿಕೆ ಒಂದೆಡೆ ಆದರೆ ಮತದಾರರ ತೀರ್ಮಾನವೇ ಅಂತಿಮವಾಗಿ ಯಾರ ಕೊರಳಿಗೆ ಜಯಮಾಲೆ ಬೀಳುತ್ತದೆ ಎಂಬುದು ಮೇ 13ರ ತನಕ ಕಾಯಬೇಕಾಗಿದೆ.

ಮತದಾರರು ಯಾವುದೇ ಆಸೆಗೆ ಬಲಿಯಾಗಿ ತಮ್ಮತನವನ್ನು ಮಾರಿಕೊಳ್ಳದೇ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಅಭಿವೃದ್ಧಿಗೆ ಒತ್ತು ಕೊಡುವವರಿಗೆ ಮತ ನೀಡಿ ಮತದಾನಕ್ಕೆ ಒಂದು ಅರ್ಥ ತಂದು ಕೊಡಬೇಕು. ಹಣ ಬಲ, ಜಾತಿ ಬಲದ ರಾಜಕೀಯಕ್ಕೆ ಮೇ 10ರಂದು ಮತದಾರರು ತೆರೆ ಎಳೆದು ಸುಭದ್ರ ಸರ್ಕಾರ ನಿರ್ಮಾಣಕ್ಕೆ ಕಾರಣವಾಗ ಬೇಕು ಎಂಬುದೇ ಪ್ರತಿಬಾರಿ ಕೇಳಿಬರುತ್ತಲೇ ಇದೆ, ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವೊಮ್ಮೆ ತಿರುಮುರುವಾಗಿದ್ದು ಇದೆ.

ಈ ನಡುವೆ ಮತದಾನದ ಪ್ರಮಾಣ ಹೆಚ್ಚಾಗಲು ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಹತ್ತು ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಯಾರಿಗೆ ಮತ ಹಾಕಿದರೆ ನಮಗೇನು ಲಾಭ ಎಂಬುವ ಮನೋಭಾವನೆ ಮತದಾರರಲ್ಲಿ ಬರುತ್ತಿದೆ. ಮತದಾನ ಮಾಡುವುದು ನಮ್ಮ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮ ಕರ್ತವ್ಯವಾU Àಬೇಕು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯೋಗ್ಯ ವ್ಯಕ್ತಿಗೆ ಮತ ಹಾಕಿ ಕರ್ತವ್ಯ ನಿಭಾಯಿಸಬೇಕು. ಒಂದು ಮತ ಸರ್ಕಾರ ರಚಿಸಲು ಕಾರಣವಾಗುತ್ತದೆ. ಅಂತಹ ಅಮೂಲ್ಯ ಮತವನ್ನು ಚಲಾಯಿಸದೇ ವ್ಯರ್ಥ ಮಾಡಿಕೊಳ್ಳಬಾರದು.

ಡಿಸಿ ಕ್ರಮ: ಈ ಬಾರಿ 2023ರ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗುವಂತೆ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಇ ಯಶ್ವಂತ ವಿ. ಗುರುಕರ್ ಅವರು ಒಲವು ತೋರಿ ಕ್ರಮ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಎಲ್ಲ ಪ್ರಜ್ಞಾವಂತ ಮತದಾರರು ನಿಗಾ ವಹಿಸುವುದು ಅಗತ್ಯವಾಗಿದೆ.