ಬಿಸಿಯೂಟ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

ಗುಳೇದಗುಡ್ಡ, ಮಾ26: ಸಮಾಜದಲ್ಲಿ ಯಾವ ಮಕ್ಕಳು ಅನ್ನ ಇಲ್ಲದೆ ಬಳಲಬಾರದೆಂದು ಸರ್ಕಾರ ಶಾಲಾ ಮಕ್ಕಳಿಗೆ ಬಿಸಿ ಯೂಟ ಯೋಜನೆ ಜಾರಿಗೆ ತಂದಿದೆ. ಈ ಬಿಸಿ ಯೂಟ ಸೌಲಭ್ಯವನ್ನು ಎಲ್ಲ ಮಕ್ಕಳು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಜಿಲ್ಲಾ ಅಕ್ಷರ ದಾಸೋಹ ಯೋಜನಾದಿಕಾರಿ ಎನ್.ವೈ. ಕುಂದರಗಿ ಹೇಳಿದರು.
ಅವರು ಗುರುವಾರ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕ ಪಂಚಾಯ್ತಿ ಹಾಗೂ ಹೊಳೆ ಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ 132 ದಿನಗಳ ಬಿಸಿಯೂಟದ ಆಹಾರ ದಾನ್ಯಗಳ ಸಾಂಕೇತಿಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜೆ. ಜೋಳಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಲ್ಲೂಕ ಪಂಚಾಯ್ತಿ ಅಧಿಕಾರಿ ಎ.ಬಿ. ಆದಾಪೂರ, ಹುಚ್ಚೇಶ್ವರ ಪಾಠ ಶಾಲೆಯ ವ್ಯವಸ್ಥಾಪಕ ಶ್ರೀಧರ ಶೆಟ್ಟರ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ ಘಟಕದ ಅಧ್ಯಕ್ಷ ಸಂತೋಷ ಎಸ್. ಪಟ್ಟಣಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ ಘಟಕದ ಅಧ್ಯಕ್ಷ ವೈ.ಎಸ್. ಮಜ್ಜಗಿ, ಶಾಸಕರ ಶಾಲೆಯ ಮುಖ್ಯಶಿಕ್ಷಕ ಬಿ.ಆರ್. ಪಾಟೀಲ, ಸಿ.ಆರ್.ಪಿ ಸಂಯೋಜಕ ಮಂಜುನಾಥ ಎಸ್. ಉಂಕಿ, ಪ್ರದೀಪ ಕಂಚ್ಯಾಣಿ, ಶಾಲೆಯ ಶಿಕ್ಷಕ-ಶಿಕ್ಷಕಿಯರು ಇದ್ದರು.