ಬಿಸಿಯೂಟ ನೌಕರರ ಬಾಕಿ ವೇತನ ಬಿಡುಗಡೆಗೆ-ಹೆಚ್.ಶರ್ಫುದ್ದೀನ್ ಆಗ್ರಹ

ಮಾನ್ವಿ,ನ.೦೯- ಮಾನ್ವಿ ಹಾಗೂ ಸಿರವಾರ ತಾಲೂಕಿನ ಅಕ್ಷರ ದಾಸೋಹ ಬಿಸಿಯೂಟ ನೌಕರರ ಬಾಕಿಯಿರುವ ೩ ತಿಂಗಳ ವೇತನ ಒಂದು ವಾರದೊಳಗಾಗಿ ಬಿಡುಗಡೆ ಮಾಡಬೇಕು ಎಂದು ಸಿಐಟಿಯು ತಾಲೂಕಾಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಮಾನ್ವಿ,ಸಿರವಾರ ತಾಲೂಕ ಸಮಿತಿಯಿಂದ ತಾಲೂಕ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಕ್ಷರ ದಾಸೋಹ ಅಧಿಕಾರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು.
ಕಳೆದ ೩ ತಿಂಗಳ ಬಾಕಿ ವೇತನ ಹಾಗೂ ಮೇ ತಿಂಗಳ ೧೫ ದಿನದ ಗೌರವಧನ ನೀಡದೆಯಿರುವುದರಿಂದ ಅಕ್ಷರ ದಾಸೋಹ ಬಿಸಿಯೂಟ ನೌಕರರು ತೀವ್ರ ಆರ್ಥಿಕ ಸಂಕಷ್ಠಕ್ಕೆ ಗುರಿಯಾಗಿದ್ದಾರೆ. ಒಂದು ವಾರದೊಳಗೆ ಬಾಕಿ ವೇತನ ಬಿಡುಗಡೆ ಮತ್ತು ಎಸ್‌ಡಿಎಂಸಿ, ಮುಖ್ಯಗುರುಗಳ ಕಿರುಕುಳ ವಿರುದ್ದ ಸೂಕ್ತ ಕ್ರಮ ಹಾಗೂ ಸಾದಿಲ್ವಾರ ಹಣ ಬಿಡುಗಡೆ, ಬಿಸಿಯೂಟ ನೌಕರರ ಕುಂದು ಕೊರತೆ ಸಭೆ ಏರ್ಪಡಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಹೆಚ್.ಶರ್ಫುದ್ದೀನ್ ಪೋತ್ನಾಳ್ ಒತ್ತಾಯಿಸಿದರು.
ಈ ವೇಳೆ ಸಿಐಟಿಯು ತಾಲೂಕ ಉಪಾಧ್ಯಕ್ಷ ಶಿವರಾಜ ಗುಜ್ಜಲ್ ಪೋತ್ನಾಳ್, ಮುಖಂಡ ಮಹ್ಮದ್ ನೀರಮಾನ್ವಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಮಾನ್ವಿ,ಸಿರವಾರ ತಾಲೂಕ ಸಮಿತಿ ಗೌರವಾಧ್ಯಕ್ಷ ಹುಸೇನ್‌ಸಾಬ್, ಅಧ್ಯಕ್ಷೆ ತೆರೆಸಾ ಚಿನ್ನಪ್ಪ ಪಟ್ಟದಕಲ್, ಪ್ರಧಾನಕಾರ್ಯದರ್ಶಿ ಲಕ್ಷ್ಮೀಬಾಯಿ, ಖಜಾಂಚಿ ಗಂಗೂರೇಖಾ, ಉಪಾಧ್ಯಕ್ಷೆ ಸಂತೋಷಮ್ಮ ಕೋನಾಪುರಪೇಟೆ, ಉಪಕಾರ್ಯದರ್ಶಿ ಕಾಳಮ್ಮ, ಕಾರ್ಯದರ್ಶಿ ಕೆ.ಲಕ್ಷ್ಮೀ, ರೇಣುಕಮ್ಮ, ವಸಂತಮ್ಮ, ಬಿ.ಲಕ್ಷ್ಮೀ, ಗಂಗಮ್ಮ ಸಿರವಾರ, ರೇಣುಕಾ, ಹುಲಿಗೆಮ್ಮ, ಗಂಗಮ್ಮ, ಹನುಮಂತಿ, ಮೀನಾಕ್ಷಿ, ಮಹಾದೇವಿ, ಯಂಕಮ್ಮ ಸೇರಿದಂತೆ ಅನೇಕರಿದ್ದರು.