ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು11: ನಗರದ ಗಾಂಧಿ ವೃತ್ತದಿಂದ ತಾಲೂಕು ಪಂಚಾಯತಿ ಕಾರ್ಯಾಲಯದ ವರೆಗೆ ತಾಲ್ಲೂಕಿನ ಅಕ್ಷರ ದಾಸೋಹ ನೌಕರರ ಸಂಘ(ಸಿ.ಐ.ಟಿ.ಯು) ತಾಲೂಕು ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದರು.
ಮಧ್ಯಹ್ನದ ಬಿಸಿಯೂಟಿಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ ಮಕ್ಕಳ ಗೈರು ಹಾಜರಿ ತಡೆಗಟ್ಟಲು ಅಪೌಷ್ಟಿಕತೆ ತಡೆಗಟ್ಟಲು ಶಿಕ್ಷಣ ಇಲಾಖೆಯ ಮತ್ತು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1,17,000 ಮಹಿಳೆಯರು 58,39,000 ಬಡ ರೈತ ಕೃಷಿ ಕೂಲಿಕಾರರ ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ ಹಾಲು ನೀಡಿ ಶಾಲಾ ಸ್ವಚ್ಚತೆ ಮಾಡಿ ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಸೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಪರಿಶ್ರಮವಿದೆ. ದಿನಕ್ಕೆ ಸುಮಾರು 6 ಗಂಟೆ ಗಳಿಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಪರಿಶ್ರಮ ಗುರುತಿಸಿ ಕನಿಷ್ಟ ಕೂಲಿ ರೂ.21,000 ನೀಡಬೇಕಾಗಿದೆ. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಿಗೆ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ವಿ.ದುರುಗಮ್ಮ ತಿಳಿಸಿದರು.
ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಈಡೇರಿಸಬೇಕೆಂದು ತಾಲೂಕು ಪಂಚಾಯತಿ ಅಧಿಕಾರಿಗಳ ಮುಖಾಂತರ ಸಿ.ಎಂ ಸಿದ್ದರಾಮಯ್ಯ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸದಸ್ಯರಾದ ಲತೀಫ್ ಖಾಜ, ಓಬಳೇಶ, ತಿಪ್ಪಯ್ಯ, ಎಚ್.ಅಂಜಿನಮ್ಮ, ಗಂಗಮ್ಮ, ಅಂಬಮ್ಮ, ರಾಧ, ಮಾರೆಮ್ಮ, ಗಂಗಮ್ಮ, ಶಾಂತಮ್ಮ, ಶಾರದಮ್ಮ, ಯಲ್ಲಮ್ಮ, ಪವಿತ್ರ, ನಾಗಮ್ಮ, ರಂಗಮ್ಮ, ಶ್ರೀದೇವಿ, ಜಯಲಕ್ಷ್ಮಿ, ಈರಮ್ಮ, ಪಕ್ಕಿರಮ್ಮ, ಬಾಗ್ಯಮ್ಮ, ಮಲ್ಲಮ್ಮ, ಲಕ್ಷ್ಮೀ, ಭಾರತಿ ಇದ್ದರು.