ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

ಜಗಳೂರು.ಜ.೫;  ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಕಾರ್ಯಕರ್ತೆಯರು ಸರ್ಕಾರದ ವಿರುದ್ದ ಘೋಷಣೆ ಕೂಗಿ ನಂತರ ಗ್ರೇಡ್ -2 ತಹಶೀಲ್ದಾರ್ ರಾಮಚಂದ್ರಪ್ಪ ಅವರ ಮುಖಾಂತರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.ಕಳೆದ 18 ವರ್ಷಗಳಿಂದ ಮದ್ಯಾಹ್ನ ಉಪಹಾರ ಯೋಜನೆಯಡಿ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಿರಂತರವಾಗಿ  ಕೆಲಸ ನಿರ್ವಹಿಸುತ್ತಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಕೊರೊನ ಆಕ್ರಮಣದಿಂದ ಶಾಲೆಗಳು ಮುಚ್ಚಿದರೂ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ದಾಸ್ತಾನು ವಿತರಣೆ ಮಾಡುವಲ್ಲಿ ನಿರತರಾಗಿದ್ದರು ಆದರೆ ವೇತನ ಮಾತ್ರ ವಿಳಂಬವಾಗಿದೆ ಇದೀಗ ಮೂರು ತಿಂಗಳ ವೇತನ ಪಾವತಿಸಲು ಸರ್ಕಾರದ ಆದೇಶಕ್ಕೆ ಸ್ವಾಗತರ್ಹವಾಗಿದೆ ಆದರೆ ಇನ್ನೂ ಸೆಪ್ಟೆಂಬರ್ ನಿಂದ  4 ತಿಂಗಳ ವೇತನ ಶೀಘ್ರ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿದರು.ಕನಿಷ್ಠ ಕೂಲಿ ,ಇಎಸ್ ಐ ಪಿಎಫ್ ,ಅಪಘಾತ ಮತ್ತು ಮರಣಕ್ಕೆ  5 ಲಕ್ಷ ಪರಿಹಾರ,ಕಲ್ಯಾಣ ಮಂಡಳಿ ಹಾಗೂ ಬೇಸಿಗೆ ದಸರಾ ರಜೆಗಳಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿ ತಿಂಗಳ 5 ನೇ ತಾರಿಖು ವೇತನ ಪಾವತಿಸಬೇಕು ನಿವೃತ್ತಿಯ ನಂತರ ಮಾಸಿಕ 5 ಸಾವಿರ ನಿಗದಿಪಡಿಸಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮಹಮ್ಮದ್ ಭಾಷಾ ಎಐಎಸ್ ಎಫ್ ರಾಜ್ಯ ಮುಖಂಡ ಮಾದಿಹಳ್ಳಿ ಮಂಜಪ್ಪ ಕಟ್ಟಡ ಕಾರ್ಮಿಕ ಮುಖಂಡ ವೀರಣ್ಣ ಬಿಸಿಯೂಟ  ಕಾರ್ಯಕರ್ತೆಯರಾದ ಚನ್ನಮ್ಮ ದಾಕ್ಷಾಯಿಣಿ ವೀಣಾ ವಸಂತ ಚೌಡಮ್ಮ ಗಂಗಮ್ಮ ಶಹನಾಜ್ ವಿಶಾಲ ನಾಗಮ್ಮ ನಿರ್ಮಲ ಪ್ರೇಮ ದುರುಗಮ್ಮ ಸೇರಿದಂತೆ ಭಾಗವಹಿಸಿದ್ದರು.