ಬಿಸಿಯೂಟದ ವ್ಯವಸ್ಥೆ ಪರಿಶೀಲನೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು29: ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ್ ಭೇಟಿ ನೀಡಿ ಬಿಸಿಯೂಟದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ಶಾಲೆಗೆ ಭೇಟಿ ನೀಡಿದಾಗ ಶಾಲೆಯಲ್ಲಿ ಮಕ್ಕಳಿಗೆ
ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಬಳಸುವ ಅಕ್ಕಿ, ಬೇಳೆ, ಖಾರಪುಡಿ, ಹುಣಸೆಹಣ್ಣು, ಹಾಲಿನಪುಡಿ ಮತ್ತು ತರಕಾರಿಗಳನ್ನು ಪರಿಶೀಲನೆ ನಡೆಸಿ ಅಡುಗೆ ಮಾಡುವ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಂಡು ಮಕ್ಕಳಿಗೆ ರುಚಿಯಾಗಿ ಆಹಾರವನ್ನು ತಯಾರಿಸಿ ಕೊಡುವಂತೆ ಅಡುಗೆ ಸಿಬ್ಬಂದಿಗೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ಬಿಸಿಯೂಟ: ಮಧ್ಯಾಹ್ನದ ಸಮಯವಾದ ಕಾರಣ ಮಕ್ಕಳೊಂದಿಗೆ ಕುಳಿತು ಮಕ್ಕಳಿಗೆ ತಯಾರು ಮಾಡಲಾದ ಬಿಸಿಯೂಟದ ಸವಿಯನ್ನು ಸವಿದಿದ್ದು ವಿಶೇಷವಾಗಿತ್ತು, ಅಲ್ಲಿಂದ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಕೆಲ ಪಾಠಗಳನ್ನು ಬೋಧನೆ ಮಾಡಿದರು. 7ನೇ ತರಗತಿ ಭಾಷಾ ವಿಷಯದ ಮೂರನೇ ಪಾಠ ಹಿಲ್ಟನ್ ಹೆಡ್ ಕುರಿತು ಕೆಲ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದರು. ಕೆಲ ಮಕ್ಕಳು ಮಾತ್ರ ಪ್ರಶ್ನೆಗಳಿಗೆ ಉತ್ತರಿಸಿದಾಗ ಎಲ್ಲರೂ ಉತ್ತರಿಸಲು ಪ್ರಯತ್ನ ಮಾಡಬೇಕೆಂದು ಪೆÇ್ರೀತ್ಸಾಹಿಸಿದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹದ(ಮಧ್ಯಾಹ್ನ ಬಿಸಿಯೂಟ) ಜಿಲ್ಲಾ ಯೋಜನಾಧಿಕಾರಿ ಝೆಡ್.ಎಮ್.ಖಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.