ಬಿಸಿಯೂಟದ ಗುಣಮಟ್ಟ ಉತ್ತಮ ಪಡಿಸಿ : ಕ್ರಾಂತಿ ಕಲವಾಡಿಕರ್

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಜು.24:ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಗುಣಮಟ್ಟ ಉತ್ತಮ ಪಡಿಸಬೇಕು ಎಂದು ಕೆಎಲ್‍ಇ ಸಂಸ್ಥೆ ಬೀದರನ ಆಡಳಿತಾಧಿಕಾರಿ ಕ್ರಾಂತಿ ಕಲವಾಡಿಕರ್ ಹೇಳಿದರು.

ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ, ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿಯುತ್ತಾ ಅವರು ಮಾತನಾಡಿದರು. ಸರ್ಕಾರ ಕೊಡುವ ಬಿಸಿಯೂಟದ ಅಕ್ಕಿ, ಗೋಧಿ, ಎಣ್ಣೆ, ಬೇಳೆ ಎಲ್ಲವೂ ಉತ್ತಮ ಗುಣಮಟ್ಟದ್ದಾಗಿವೆ. ಇವುಗಳ ಸದುಪಯೊಗ ಪಡೆದುಕೊಂಡು ಅಡುಗೆ ಮಾಡುವಾಗು ರುಚಿಕರವಾಗಿ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಊಟ ಮಾಡುವಂತೆ ತಯ್ಯಾರಿಸಬೇಕು ಎಂದು ಅಡುಗೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಅಡುಗೆ ಕೋಣೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಅಡುಗೆ ತಯ್ಯಾರಿಕರು ತಲೆಗೆ ಗೌನ, ಕೈಗೆ ಹ್ಯಾಂಡ್ ಕವರ್, ಮಾಸ್ಕ್‍ಗಳನ್ನು ಧರಿಸಿ ಅಡುಗೆ ಮಾಡಬೇಕು. ಕೆಲವು ಕಡೆ ಬಿಸಿಯೂಟ ಸವಿದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎನ್ನುವ ವರದಿ ಬಂದಿದೆ. ಇಲ್ಲಿಯ ಸಿಬ್ಬಂದಿಗಳು ಇದಕ್ಕೆ ಆಸ್ಪದ ಕೊಡದೇ ಎಲ್ಲಾ ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಂಡು ಅಡುಗೆ ತಯ್ಯಾರಿಸಬೇಕು ಎಂದು ಎಚ್ಚರಿಸಿದರು.

ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಬಿಸಿಯೂಟ ತಯ್ಯಾರಿಸುವ ಸಿಬ್ಬಂದಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಆಡಳಿತಾಧಿಕಾರಿಗಳೊಂದಿಗೆ ಬಸಿಯೂಟ ಸವಿದು ಸಂತಸ ಪಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ, ಕಾರ್ಯದರ್ಶಿ ಸಂಜೀವ ಕಲವಾಡಿಕರ, ಉಪಾಧ್ಯಕ್ಷ ಚಿರಂಜೀವ ಕಲವಾಡಿಕರ, ಶಿಕ್ಷಕ ಶಿವಶರಣಪ್ಪ ಸೊನಾಳೆ, ಶೋಭಾ ಮಾಸಿಮಾಡೆ, ಆರತಿ ಥಮಕೆ, ಶಿವಲೀಲಾ ಸತೀಷ ಮುದಾಳೆ, ವಿಜಯಕುಮಾರ ಬಾಜೋಳಗಾ, ಪ್ರವೀಣ ಸಿಂಧೆ, ಓಂ ಬಿರಾದಾರ, ಶಿವಕುಮಾರ ವಾಡಿಕರ, ಆನಂದ ಖಂಡಗೊಂಡ, ಪ್ರದೀಪ ಜೊಳದಪಕೆ ಇದ್ದರು.