
ಕೆಂಭಾವಿ: ಜು.12:ಇಲ್ಲಿನ ಸರಕಾರಿ ಬಾಲಕಿಯರ ಪೌಢ್ರ ಶಾಲೆಯಲ್ಲಿ ಜು.8 ಶನಿವಾರ ಬೆಳಿಗ್ಗೆ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸದಂತೆ ಶಾಲೆ ಮುಖ್ಯ ಗುರುಗಳನ್ನು ಅಮಾನತ್ತು ಮಾಡಿರುವುದನ್ನು ಖಂಡಿಸಿ ಸಾಮೂಹಿಕ ದಲಿತಪರ ಸಂಘಟನೆಯ ವತಿಯಿಂದ ಮಂಗಳವಾರ ಶಾಲೆಯ ಗೇಟ್ ಹತ್ತಿರ ಸಾಂಕೇತಿಕ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಕಲಬುರ್ಗಿರವರಿಗೆ ಬರೆದ ಮನವಿಯನ್ನು ಕ್ರೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಲವರು ಮಾತನಾಡಿ ಸುಮಾರು11 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರು ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಗುರು ಅನೀಲಕುಮಾರ ರವರು ಯಾವುದೆ ಒಂದು ಕಪ್ಪು ಚುಕ್ಕಿ ಇಲ್ಲದೆ ಸಮರ್ಪಣಾ ಭಾವದೊಂದಿ ಸೇವೆ ಸಲ್ಲಿಸುತ್ತಾ, ವೃತ್ತಿ ಗೌರವವನ್ನು ತೋರಿದ ವ್ಯಕ್ತಿತ್ವ ಅವರದ್ದಾಗಿದೆ. ಹನ್ನೊಂದು ವರ್ಷಗಳಿಂದಲೂ ಪ್ರಧಾನ ಗುರುಗಳಾಗಿ ಶಾಲೆಗೆ ಅತ್ಯತ್ತಮ ಆಡಳಿತ ನೀಡಿದ್ದಾರೆ. ಇದು ಶಾಲೆಯ ಮಕ್ಕಳಿಗು ಪಾಲಕರಿಗೂ ಗೊತ್ತಿರುವ ವಿಷಯ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಇಂತಹ ಶಿಕ್ಷಕರನ್ನು ಅಮನತ್ತು ಗೊಳಿಸುವುದರ ಮೂಲಕ ಮೇಲಾಧಿಕಾರಿಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಿದೆ. ಕೂಡಲೆ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು ಹಾಗೂ ನಿಜವಾಗಿ ತಪ್ಪು ಮಾಡಿದವರ ವಿರುಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಾಮೂಹಿಕ ದಲಿತಪರ ಸಂಘಟನೆಯ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.