ಬಿಸಿಎಂ ಜಿಲ್ಲಾ ಅಧಿಕಾರಿ ವರ್ಗಾವಣೆ ಕೈಬಿಡಲು ಆಗ್ರಹ

ಕಲಬುರಗಿ ಸ 16: ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ವರ್ಗಾವಣೆ ರದ್ದುಗೊಳಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಾಸ್ಟೆಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ನೀಡಬೇಕು. ಕೋವಿಡ್ 19 ರಜೆ ವೇತನ ಪಾವತಿಸುವಂತೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ,ಮಲ್ಲಮ್ಮ ಕೋಡ್ಲಿ ,ಫಾತಿಮಾ ಬೇಗಂ ಫತ್ತೇಪಾಹಡ,ಶಶಿಕಲಾ ಮದರ್ಕಿ,ಸುರೇಶ ದೊಡ್ಡಮನಿ,ಪರಶುರಾಮ ಹಡಗಲಿ,ನಾಗರಾಜ, ಮಾಪಣ್ಣ ಜಾನಕರ್ ಸೇರಿದಂತೆ ಹಲವರು ಪಾಲ್ಗೊಂಡರು