ಬಿಸಲವಾಡಿಕ್ವಾರಿ ದುರಂತ : ಮೃತಪಟ್ಟಕಾರ್ಮಿಕರ ಕುಟುಂಬಗಳಿಗೆ ಉಸ್ತುವಾರಿ ಸಚಿವರಿಂದ ಸಾಂತ್ವನ

ಚಾಮರಾಜನಗರ, ಜ.08- ಚಾಮರಾಜನಗರತಾಲೂಕಿನ ಬಿಸಲವಾಡಿಗ್ರಾಮದಲ್ಲಿಇತ್ತೀಚೆಗೆ ಸಂಭವಿಸಿದ ಬಿಳಿಕಲ್ಲು ಕ್ವಾರಿದುರಂತದಲ್ಲಿ ಮೃತಪಟ್ಟ ಕಾಗಲವಾಡಿ ಮೋಳೆಯ ಮೂವರುಕಾರ್ಮಿಕರ ಕುಟುಂಬಗಳಗೆವಸತಿ, ಮೂಲಸೌಲಭ್ಯಅಭಿವೃದ್ದಿ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ವಿ. ಸೋಮಣ್ಣಅವರುಸಾಂತ್ವನ ಹೇಳಿದರು.
ತಾಲೂಕಿನ ಕಾಗಲವಾಡಿ ಮೋಳೆಗೆ ಇಂದುಭೇಟಿ ನೀಡಿದಜಿಲ್ಲಾಉಸ್ತುವಾರಿ ಸಚಿವರುದುರಂತದಲ್ಲಿ ಮೃತಪಟ್ಟಕುಮಾರ್, ಶಿವರಾಜು ಹಾಗೂ ಸಿದ್ದರಾಜು ಅವರಕುಟುಂಬಸ್ಥರಿಗೆಸಾಂತ್ವನ ಹೇಳಿ ವೈಯಕ್ತಿಕವಾಗಿತಲಾ 50 ಸಾವಿರರೂ. ಪರಿಹಾರಧನ ನೀಡಿದರು.
ಮೃತರಕುಟುಂಬದ ಸದಸ್ಯರೊಂದಿಗೆ ಮಾತನಾಡಿಅವರ ಕಷ್ಟಗಳನ್ನು ಆಲಿಸಿ, ಕುಟುಂಬದ ವಿವರಗಳನ್ನು ಪಡೆದರು. ಕಾರ್ಮಿಕಇಲಾಖೆಯಿಂದಕುಟುಂಬದವರಿಗೆ ಪರಿಹಾರಕೊಡಿಸುವಂತೆಜಿಲ್ಲಾಕಾರ್ಮಿಕಅಧಿಕಾರಿ ಮಹದೇವಸ್ವಾಮಿಅವರಿಗೆ ಸೂಚಿಸಿದರು.
ಮೂವರುಕಾರ್ಮಿಕರ ಪೈಕಿ ನೊಂದಾಯಿತಕಟ್ಟಡಕಾರ್ಮಿಕರಗುರುತಿನಚೀಟಿ ಹೊಂದಿರುವಕುಮಾರ್‍ಅವರಕುಟುಂಬಕ್ಕೆ 5 ಲಕ್ಷರೂ. ಪರಿಹಾರ ಸಿಗಲಿದೆ. ನೊಂದಾಯಿತರಲ್ಲದ ಉಳಿದ ಇಬ್ಬರುಕಾರ್ಮಿಕರಾದ ಶಿವರಾಜು, ಸಿದ್ದರಾಜು ಅವರಕುಟುಂಬಕ್ಕೆತಲಾ 2 ಲಕ್ಷರೂ.ಪರಿಹಾರ ನೀಡಲುಅವಕಾಶವಿದೆಎಂದುಕಾರ್ಮಿಕಅಧಿಕಾರಿ ಮಹದೇಸ್ವಾಮಿಅವರು ಮಾಹಿತಿ ನೀಡಿದರು.
ಈ ವೇಳೆ ಪರಿಹಾರಕ್ಕಾಗಿಕಡತ ಕಳುಹಿಸಿ.ನಾನು ಖುದ್ದಾಗಿಕಾರ್ಮಿಕಇಲಾಖೆಯ ವರಿಷ್ಠ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಪರಿಹಾರಕೊಡಿಸುವುದಕ್ಕೆಕ್ರಮವಹಿಸುತ್ತೇನೆಎಂದುಜಿಲ್ಲಾಉಸ್ತುವಾರಿ ಸಚಿವರು ಹೇಳಿದರು.
ದುರಂತದಲ್ಲಿ ಮೃತಪಟ್ಟ ಸಿದ್ದರಾಜು ಅವರ ಪತ್ನಿಗೆಇನ್ನೂ 19 ವರ್ಷವಾಗಿದ್ದು,ಅವರ ಮುಂದಿನ ಜೀವನಕ್ಕೆ ನೆರವಾಗಬೇಕಿದೆ. ಅವರ ಭವಿಷ್ಯ ಮುಖ್ಯವಾಗಿದೆ. ಜಿಲ್ಲಾ ಪಂಚಾಯಿತಿಯಿಂದಉದ್ಯೋಗ ನೀಡಲುಕ್ರಮವಹಿಸಬೇಕು ಎಂದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಕೆ.ಎಂ. ಗಾಯತ್ರಿಅವರಿಗೆ ಸಚಿವರು ಸೂಚಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದಜಿಲ್ಲಾಉಸ್ತುವಾರಿ ಸಚಿವರುಗಣಿಗಾರಿಕೆ ಸಮಯದಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ದುರಂತ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿಜಿಲ್ಲಾಧಿಕಾರಿಯವರು ಸಭೆಕರೆದು ನಿಯಮಗಳನ್ನು ಬಿಗಿಯಾಗಿಅನುಸರಿಸುವ ಸಂಬಂಧಕ್ರಮವಹಿಸಲು ಸೂಚಿಸುವುದಾಗಿಜಿಲ್ಲಾಉಸ್ತುವಾರಿ ಸಚಿವರಾದ ವಿ.ಸೋಮಣ್ಣಅವರು ತಿಳಿಸಿದರು.
ಜಿಲ್ಲಾಧಿಕಾರಿಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್,ಉಪವಿಭಾಗಾಧಿಕಾರಿಗೀತಾ ಹುಡೇದ, ತಹಶೀಲ್ದಾರ್ ಬಸವರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದಎ.ಆರ್. ಬಾಲರಾಜು, ಇತರರುಇದ್ದರು.