
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು 17 ನೇ ವಾರ್ಡಿನ ಬಿಸಿಲಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಸ್ಥಳಿಯ ಪಾಲಿಕೆ ಸದಸ್ಯ ನಂದೀಶ್ , ಮುಖಂಡ ಬಿ.ಕೆ.ಕೆರಕೋಡಪ್ಪ ಮೊದಲಾದವರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಬೃಹತ್ ಹೂ ಮಾಲೆ ಮೂಲಕ ಸ್ವಾಗತಿಸಿ ಸಂಭ್ರಮಿಸಿದರು.
ಭರತ್ ರೆಡ್ಡಿ ಮಾತನಾಡಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬಳ್ಳಾರಿ ನಗರಕ್ಕೆ ಇಂದಿಗೂ ಒಳಚರಂಡಿ,ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಾವು ಮಾತಾಡುತ್ತೇವೆ ಎಂದರೆ ಇದು ಖೇದಕರ ಸಂಗತಿ. ನಗರವನ್ನು ಸ್ವಚ್ಛ ಹಾಗೂ ಸುಂದರನಗರವನ್ನಾಗಿಸುವುದು, ಭ್ರಷ್ಟಾಚಾರ ಮುಕ್ತಆಡಳಿತ ನೀಡುವುದು ನನ್ನ ಸಂಕಲ್ಪ ಎಂದರು. ಸಾಮಾಜಿಕ ನ್ಯಾಯದಲ್ಲಿ ವಿಶ್ವಾಸವಿಡುವ ಕಾಂಗ್ರೆಸ್ ಪಕ್ಷ ಎಲ್ಲಾ ಜನರ ಅಭಿವೃದ್ಧಿಯನ್ನುದೃಷ್ಟಿಯಲ್ಲಿಟ್ಟುಕೊಂಡು ಹಲವು ಗ್ಯಾರಂಟಿಯೋಜನೆಗಳನ್ನು ಘೋಷಿಸಿದೆ. ಪ್ರತಿ ಕುಟುಂಬದಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳು, ಪ್ರತಿಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಚೀಟಿಇರುವ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ,ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಅಡಿ ಭತ್ಯೆ,ರಾಜ್ಯದ 25 ಸಾವಿರ ಪೌರ ಕಾರ್ಮಿಕರ ನೇಮಕಾತಿ ಹಾಗೂರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‍ನಲ್ಲಿ ಉಚಿತಪ್ರಯಾಣಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದ ಅವರು ಇಂತಹ ಜನಪರ ಯೋಜನೆಗಳನ್ನು ನಮ್ಮಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಜಾರಿಗೆ ತರಲಿದೆಎಂದು ವಿಶ್ವಾಸ ವ್ಯಕ್ತಪಡಿಸಿದರು