(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿಲ್ ಹೆಚ್.ಲಾಡ್ ಅವರು ಇಂದು ಬಿಸಲಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಗ್ರಾಮದ ಮುಖ್ಯ ಬೀದಿ ಮತ್ತು ಓಣಿಗಳಲ್ಲಿ ಸಂಚರಿಸಿ ಮತದಾರರಲ್ಲಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ನಾನು ಈಹಿಂದೆ ಎದುರಿಸಿದ ಮೂರು ಚುನಾವಣೆಗಳಲ್ಲಿ ಬಿಸಿಲಳ್ಳಿ ಜನತೆ ಹೆಚ್ಚಿನ ಮತ ನೀಡಿದ್ದನ್ನು ಮರೆತಿಲ್ಲ. ಶಾಸಕನಾಗಿದ್ದಾಗ ನಿಮ್ಮ ಸಮಸ್ಯೆಗಳಿಗೆ ಆದಷ್ಟು ಸ್ಪಂದಿಸಿರುವೆ. ಬಡವರ ಪರವಾದ ಜೆಡಿಎಸ್ ಸರ್ಕಾರ ರಚನೆಗೆ, ಕುಮರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯ ಮಂತ್ರಿ ಮಾಡಲು ಜೆಡಿಎಸ್ ಗೆ ಮತ ನೀಡಿ. ಈ ಅನಿಲ್ ಲಾಡ್ ಗೆ ಆಸಿರ್ವಾದ ಮಾಡಿ ಎಂದರು. ಅನಿಲ್ ಅವರ ಮಾತು ಕೇಳಲು ನೂರಾರು ಮಹಿಳೆಯರು, ಪುರುಷರು ಸೇರಿದ್ದು ವಿಶೇಷವಾಗಿತ್ತು. ಸೇರಿದ್ದ ಜನತೆ ಮತ ನೀಡುವ ಭರವಶೆ ನೀಡಿ ಅನಿಲ್ ಅವರನ್ನು ಗೆಲಿಸಲು ಶ್ರಮಿಸುವುದಾಗಿ ಹೇಳಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.