ಬಿಸಲಳ್ಳಿಯಲ್ಲಿ ಕೇಶವರೆಡ್ಡಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಇಂದು ನಗರದ ಬಿಸಿಲಹಳ್ಳಿ,  ಬಿ.ಗೋನಾಳ, ಸತ್ಯ ನಾರಾಯಣ ಪೇಟೆ  ರಸ್ತೆ ,ರೂಪುನಗುಡಿ ರಸ್ತೆ  ಹಾಗೂ ಇತರ ಪ್ರದೇಶಗಳಲ್ಲಿ‌   ಆಮ್ ಅದ್ಮಿ ಪಕ್ಷದ ಅಭ್ಯರ್ಥಿ   ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ ಸಂಚರಿಸಿ ಮತಯಾಚನೆ ಮಾಡಿದರು.
ಪುತ್ರಿ ಮಂಜುಳಾ ಮನೋಹರ ರೆಡ್ಡಿ ಜೊತೆ ಮತದಾರರೊಂದಿಗೆ ಮಾತನಾಡಿ. ಒಂದು ಬಾರಿ ಆಮ್ ಆದ್ಮಿ ಪಾರ್ಟಿಗೆ ಅವಕಾಶ ನೀಡಿ, ಬಳ್ಳಾರಿಯ ಸಮಸ್ಯೆಗಳ ಮುಕ್ತಗೊಳಿಸೋಣ ಎಂದರು.
ಪಕ್ಷದ ಮುಖಂಡರು, ಕಾರಗಯಕರ್ತರು ಜೊತೆಗಿದ್ದರು.