
ಬೀದರ್:ನ.3: ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ಬೀದರ ನಗರದ ಬಿ.ವಿ ಭೂಮರೆಡ್ಡಿ ಕಾಲೇಜಿನ ಆವರಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಸ್ಥಾಪಿಸಲು ಸರ್ಕಾರದ ನಿಯಮಗಳ ಅನ್ವಯ ಪಟಾಕಿ ಅಂಗಡಿ ಮಾಲಿಕರಿಗೆ ಅನುಮತಿ ನೀಡಲಾಗುತ್ತದೆ ಸಾರ್ವಜನಿಕರು ಇಲ್ಲಿಂದಲೆ ಪಟಾಕಿಗಳನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪಟಾಕಿ ಅಂಗಡಿಗಳ ಮಾಲೀಕರಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭೂಮರೆಡ್ಡಿ ಕಾಲೇಜಿನಲ್ಲಿ ವಿಸ್ತಾರವಾದ ಜಾಗ ಇರುವುದರಿಂದ ಅಲ್ಲಿ ಈ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಲ 28 ಅಂಗಡಿಯವರು ಪಟಾಕಿಗಳನ್ನು ಖರೀದಿ ಮಾಡುವರು. ಸರ್ಕಾರದ ನಿಯಮಗಳನ್ನು ಪಟಾಕಿ ಅಂಗಡಿಗಳ ಮಾಲೀಕರು ಪಾಲನೆ ಮಾಡಬೇಕು ಮತ್ತು ಪಟಾಕಿ ಮಾರಾಟ ಮಾಡಲು ಹಬ್ಬದ ಮೂರು ದಿನಗಳು ಮಾತ್ರ ರಾತ್ರಿ 12 ಗಂಟೆಗಳವರೆಗೆ ಅವಕಾಶ ಇರುತ್ತದೆ ಎಂದರು.
ಪಟಾಕಿ ಅಂಗಡಿಗಳ ಮಾಲೀಕರು ಫೈರ್ ಸೆಪ್ಟಿಯ ಬಗ್ಗೆ ಮುಂಜಾಗ್ರತೆವಹಿಸಬೇಕು. ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗಳ ಅಂತರ ಕಾಯ್ದುಕೊಳ್ಳಬೇಕು ಹಾಗೂ ತಮ್ಮ ಅಂಗಡಿಗಳಲ್ಲಿ ಯಾರು ಧೂಮಪಾನ ಮಾಡಬಾರದು. ಅಗರಬತ್ತಿ ದೀಪ ಹಾಗೂ ಎಲೆಕ್ಟ್ರಿಕ್ ಕನೆಕಷನಗಳನ್ನು ತಮ್ಮ ಅಂಗಡಿಗಳಿಗೆ ಕೊಡದಂತೆ ಮುಂಜಾಗ್ರತೆ ವಹಿಸಬೇಕು ಅಂಗಡಿಗಳಲ್ಲಿ ತಮ್ಮ ಸಿಬ್ಬಂದಿಗಳು ರಾತ್ರಿ ಅಲ್ಲೆ ಇರುವಂತೆ ನೋಡೊಕೊಳ್ಳಬೇಕು ಎಂದರು.
ಪಟಾಕಿ ಅಂಗಡಿಗಳ ಮಾಲೀಕರು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಈ ದೀಪಾವಳಿ ಹಬ್ಬವನ್ನು ಶಾಂತಿ ಹಾಗೂ ಸುರಕ್ಷಿತವಾಗಿ ಆಚರಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ಅಗ್ನಿಶಾಮಕ ಅಧಿಕಾರಿ ರವೀಂದ್ರ ಘಾಟಗೆ ಅವರಿಗೆ ಭೂಮರೆಡ್ಡಿ ಕಾಲೇಜಿಗೆ ಭೇಟಿ ನೀಡಿ ಪಟಾಕಿ ಅಂಗಡಿಗಳ ಸ್ಥಳದಲ್ಲಿ ಫೈರ್ ಸೆಪ್ಟಿ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದರು. ಈ ಸಲ ಬೇಗನೆ ನಗರ ಸಭೆಯಿಂದ ಪಟಾಕಿ ಅಂಗಡಿಗಳ ಮಾಲೀಕರಿಗೆ ಅನುಮತಿ ನೀಡಿ ಯಾವುದೇ ಕಾರಣಕ್ಕೆ ವಿಳಂಬ ಮಾಡಬೇಡಿ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಮಾತನಾಡಿ ಪಟಾಕಿ ಮಾರಾಟ ಅಂಗಡಿಗಳ ಸ್ಥಳ ಧೂಮಪಾನ ನಿμÉೀಧಿತ ವಲಯವಾಗಿರಲಿದ್ದು ಅಲ್ಲಿ ಸಾರ್ವಜನಿಕರು ಧೂಮಪಾನ ಮಾಡಬಾರದು. ಒಂದು ವೇಳೆ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಪಟಾಕಿ ಅಂಗಡಿಗಳಲ್ಲಿ ಡಿಸೇಲ್. ಪೆಟ್ರೋಲ ಇಡಬಾರದು ಎಂದ ಅವರು ನಮ್ಮ ಪೆÇಲೀಸ್ ಸಿಬ್ಬಂದಿಗಳನ್ನು ಅಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ನಗರ ಸಭೆ ಆಯುಕ್ತ ಶಿವರಾಜ ರಾಠೋಡ. ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ಬೀದರ ನಗರದ ಪಟಾಕಿ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.