ಬಿವಿಎಸ್ ವತಿಯಿಂದ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಚಾಮರಾಜನಗರ, ಜೂ.05- ನಗರದಲ್ಲಿ ಬಿವಿಎಸ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಜಯಂತಿಯನ್ನು ಆಚರಿಸಲಾಯಿತು.
ಚಾಮರಾಜನಗರದ ಪ್ರವಾಸಿ ಮಂದಿರದ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಪುಷ್ಪ ಹಾರವನ್ನು ಹಾಕಿ ಪುಷ್ಪ ನಮನ ಸಲ್ಲಿಸುವ ಮೂಲಕ ನೆರವೇರಿಸಿದ್ರು. ಈ ವೇಳೆ ಮಾತನಾಡಿದ ಬಿವಿಎಸ್ ಸಂಚಾಲಕ ಪರ್ವತ್ ರಾಜ್, ದೇಶದ 530 ಸಂಸ್ಥಾನಗಳಲ್ಲಿ ಬೆರೆಳೆಣಿಕೆಯ ಸಂಸ್ಥಾನಗಳಲ್ಲಿ ಒಡೆಯರ್ ಸಂಸ್ಥಾನ ಮುಖ್ಯವಾದುದು.
ಇವರಲ್ಲಿ ಸಮಾಜಿಕವಾಗಿ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಮಾಡಿರುವುದು ನಮ್ಮ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರ. ಮೈಸೂರಿನ ನಿರ್ಮಾತೃಗಳಾದ ಇವರಿಗೆ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಯವರು ರಾಜಶ್ರೀ ಎಂಬ ಬಿರುದನ್ನು ನೀಡಿದ್ದಾರೆ. ಇಂದು ಮೈಸೂರು ನಗರಿ ಪ್ರಪಂಚದಲ್ಲಿ ಹೆಸರುವಾಸಿಯಾಗಲು ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಅವರಿಗೆ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪರ್ವತ್ ರಾಜ್ ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ದೊಡ್ಡರಾಯಪೇಟೆ ಗ್ರಾಮಪಂಚಾಯ್ತಿ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಮಹದೇವಸ್ವಾಮಿ ಕಲರ್, ರಾಮಸಮುದ್ರ ಪ್ರದೀಪ್, ವೆಂಕಟೇಶ್, ಗಾರೆಕಟ್ಟಡ ಸಮಿತಿಯ ಅದ್ಯಕ್ಷ ಸಿದ್ದರಾಜು, ಕೆಲ್ಲಂಬಳ್ಳಿ ಶಿವು, ಬಸವರಾಜು ಇದ್ದರು.