ಬಿಳಿ ಕೂದಲ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರದ ಕಾರಣದಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇದರೊಂದಿಗೆ, ಒತ್ತಡ ಮತ್ತು ಮಲಿನ ನೀರು ಕೂಡ ಬಿಳಿ ಕೂದಲ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಆದರೆ ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಈ ಸಮಸ್ಯೆಯನ್ನು ನಿವಾರಿಸಬಹುದು.

ನಿಮ್ಮ ಕೂದಲು ಸಮಯಕ್ಕೆ ಮುಂಚಿತವಾಗಿ ಬಿಳಿಯಾಗಲು ಪ್ರಾರಂಭಿಸುತ್ತಿದ್ದರೆ, ಬಿಳಿ ಕೂದಲನ್ನು ಕಿತ್ತು ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಈ ಕಾರಣದಿಂದಾಗಿ, ಬಿಳಿ ಕೂದಲು ಇನ್ನಷ್ಟು ಹೆಚ್ಚಾಗಬಹುದು.

ಬಿಳಿ ಕೂದಲು ಪ್ರಾರಂಭವಾದಾಗ, ಕೆಫೀನ್ ಹೊಂದಿರುವ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದಲ್ಲದೆ, ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ನೀವು ನಿಮ್ಮ ಆಹಾರದಲ್ಲಿ ಹಸಿರು ಚಹಾ ಎಂದರೆ ಗ್ರೀನ್ ಟೀ ಬಳಸುವುದೂ ಕೂಡ ಒಳ್ಳೆಯದು.

ಬಿಳಿ ಕೂದಲನ್ನು ತಡೆಯಲು ಗೋರಂಟಿ ಎಂದರೆ ಮೆಹಂದಿಯನ್ನು ಬಳಸಿ. ಇದು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಅನ್ವಯಿಸುವ ಮೂಲಕ, ನಿಮ್ಮ ಕೂದಲು ಹೊಳೆಯುತ್ತದೆ.

ಕೂದಲಿಗೆ ಬಣ್ಣ ಹಾಕುವ ಮೂಲಕ ಅವುಗಳ ನೈಸರ್ಗಿಕ ಬಣ್ಣ ಹೋಗುತ್ತದೆ. ನಿಮ್ಮ ಕೂದಲಿನ ಬಣ್ಣವನ್ನು ಆರಿಸುವಾಗ, ಅದು ತೈಲ ಆಧಾರಿತ ಬಣ್ಣವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ತಲೆ ಶುಚಿತ್ವ ಕಾಪಾಡಿಕೊಳ್ಳಲು ಮೊದಲು ಆದ್ಯತೆ ನೀಡಬೇಕು. ಇದರಿಂದ ಹೊಟ್ಟು ಹಾಗೂ ಕೂದಲುದುರುವುದನ್ನು ತಡೆಯಬಹುದು. ಬೇಸಿಗೆಯಲ್ಲಿ ಬಳಸುವಂಥ ಬಹುತೇಕ ಶಾಂಪೂಗಳು ಚಳಿಗಾಲಕ್ಕೆ ಒಗ್ಗುವುದಿಲ್ಲ. ಚಳಿಗಾಲದಲ್ಲಿ ಕಡಿಮೆ ಸಾಂದ್ರತೆ ಇರುವಂಥ ಹಾಗೂ ತಲೆ ಭಾಗಕ್ಕೆ ತೇವಾಂಶ ಒದಗಿಸಬಲ್ಲ ಶಾಂಪೂ ಬಳಕೆ ಉತ್ತಮ.

  • ಒಂದು ವೇಳೆ ಅತಿಯಾದ ತಲೆಹೊಟ್ಟು ಇದ್ದಲ್ಲಿ ಡ್ಯಾಂಡ್ರಫ್ ಶಾಂಪೂ ಬಳಸಿ. ಇದರಿಂದಾಗಿ ತುರಿಕೆ, ಶುಷ್ಕತನ ದೂರವಾಗುತ್ತದೆ. ಕೆಲವು ಗೃಹ ಬಳಕೆಯ ಸಾಮಗ್ರಿಗಳಾದ ತೈಲ ಹಾಗೂ ಮೊಟ್ಟೆಯ ಬಿಳಿ ಭಾಗವೂ ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ನೆರವಾಗುತ್ತದೆ. ವಯಸ್ಕರಲ್ಲಿ ನೈಸರ್ಗಿಕವಾಗಿಯೇ ಕಾಣಿಸಿಕೊಳ್ಳುವ ಮಲಸೇಝಿಯಾ ಪ್ರಭೇದ ಫಂಗಸ್ ತಲೆ ಭಾಗದ ಎಣ್ಣೆ ಅಂಶವನ್ನು ಬಳಸಿಕೊಂಡು ಬೆಳೆಯುತ್ತದೆ. ಇದು ಅಷ್ಟೇನೂ ಹಾನಿಕಾರಕ ಅನಿಸದೇ ಇದ್ದರೂ, ಫಂಗಸ್ ಹೆಚ್ಚಾದಂತೆ ತಲೆ ಭಾಗದಲ್ಲಿ ತುರಿಕೆ ಹೆಚ್ಚಾಗಿ ಹೊಟ್ಟನ್ನೂ ವೃದ್ಧಿಸುತ್ತದೆ. ಹಾಗಾಗಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಬಣ್ಣ ಹಚ್ಚಿಕೊಳ್ಳುವುದು ಉತ್ತಮ.