ಬಿಳಿಗಿರಿರಂಗಯ್ಯನ ಹುಂಡಿಯಲ್ಲಿ 37 ಲಕ್ಷ ಸಂಗ್ರಹ ಅಮೇರಿಕನ್ ಡಾಲರ್ ಕೂಡ ಅರ್ಪಣೆ

ಚಾಮರಾಜನಗರ, ನ.08:- ಜಿಲ್ಲೆಯ ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆಯು 3 ತಿಂಗಳ ಬಳಿಕ ನಡೆದಿದ್ದು 37 ಲಕ್ಷರೂ. ಸಂಗ್ರಹವಾಗಿದ್ದು ಡಾಲರ್‍ಗಳನ್ನೂ ವಿದೇಶಿ ಭಕ್ತರು ಅರ್ಪಿಸಿದ್ದಾರೆ.
ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 37,74,562 ರೂ. ಹಣ ಸಂಗ್ರಹವಾಗಿದ್ದು, 200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್‍ನ್ನೂ ಕೂಡರಂಗನಾಥನಿಗೆ ಭಕ್ತರು ಅರ್ಪಿಸಿದ್ದಾರೆ. ವಿದೇಶಿಗರು ಇಲ್ಲಿನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಪತ್ತೆಯಾಗಿದೆ.
11 ಸಣ್ಣ ಮಾಂಗಲ್ಯ, 1 ಬೆಳ್ಳಿ ಮುಖವಾಡ, 1 ಪುಟಾಣಿ ಘಂಟೆ- ಆರತಿ, 2 ಬೆಳ್ಳಿ ಕೊಳಲು, 2 ದೇವರ ಮೂರ್ತಿಯನ್ನು ಹರಕೆಕೊತ್ತ ಭಕ್ತರು ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿಸಿದ್ದಾರೆ ಎಂದು ಇಒ ಮೋಹನ್ ತಿಳಿಸಿದ್ದಾರೆ.
ಸತತ ಮಳೆ ಪರಿಣಾಮ ಹಸಿರಿನ ಚೆಲುವಿನಿಂದ ಬಿಳಿಗಿರಿರಂಗನ ಬೆಟ್ಟ ಕಂಗೊಳಿಸುತ್ತಿದ್ದು ಭಕ್ತರು, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಜನಕಿಕ್ಕಿರಿದು ಸೇರುತ್ತಿದ್ದಾರೆ.