ಬಿಳಿಗಿರಿರಂಗನ ಮೇಲೆ ಮುಸ್ಲಿಂ ವ್ಯಕ್ತಿಗೆ ಎಲ್ಲಿಲ್ಲದ ಭಕ್ತಿ

ಚಾಮರಾಜನಗರ, ಏ. ೩- ಇಲ್ಲಿನ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಸಂಪ್ರೋಕ್ಷಣೆ ಕಾರ್ಯಕ್ರಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಾಗಿಯಾಗುವ ಮೂಲಕ ದೇವರ ಮೇಲಿನ ಭಕ್ತಿಗೆ ಹಾಗೂ ಸೇವೆಗೆ ಜಾತಿ- ಧರ್ಮದ ಹಂಗಿಲ್ಲ ಎಂಬುದನ್ನು ಸಾರಿದ್ದಾರೆ.

ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿರುವ ಬೆಂಗಳೂರು ಮೂಲದ ಮುಜೀಬ್ ಅವರು ಬಿಳಿಗಿರಿರಂಗನಾಥ ಸ್ವಾಮಿಯನ್ನು ಆರಾಧಿಸುವ ಪರಮ ಭಕ್ತರಾಗಿದ್ದಾರೆ. ಅವರು ಬಿಳಿಗಿರಿಗಂಗನ ಬೆಟ್ಟದ ವ್ಯಾಪ್ತಿಯ ಯಳಂದೂರಿನಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.

೧೯೮೬ರಲ್ಲಿ ತಹಶಿಲ್ದಾರ್ ಆಗಿದ್ದ ಮುಜೀಬ್ ಅವರನ್ನು ಭೇಟಿ ಮಾಡಿದ ದೇಗುಲದ ಅರ್ಚಕರು ಬಿಳಿಗಿರಿರಂಗನ ಮೂರ್ತಿ ಅಲುಗಾಡುತ್ತಿದೆ ಎಂದು ತಿಳಿಸಿದ್ದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡ ಮುಜೀಬ್ ಅವರು ಮುಜರಾಯಿ ಇಲಾಖೆಗೆ ಪತ್ರ ಬರೆದು ಬಿಳಿಗಿರಿರಂಗನಾಥಸ್ವಾಮಿಯ ನೂತನ ಮೂರ್ತಿ ಮಾಡಿಸಲು ಮುಂದಾದರು.

ಅಲ್ಲದೆ, ಹೊಸ ಮೂರ್ತಿಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪುನರ್ ಪ್ರತಿಷ್ಠಾಪಿಸಲು ಕ್ರಮ ವಹಿಸಿದರು. ತಾಲ್ಲೂಕು ಆಡಳಿತದ ಮುಖ್ಯಸ್ಥರಾಗಿದ್ದರಿಂದ ದೇವರ ಪುನರ್ ಪ್ರತಿಷ್ಟಾಪನೆ ಪೂಜೆಗೆ ನೀವೇ ಕೂರಬೇಕೆಂದು ಅರ್ಚಕರು, ಆಗಮಿಕರು ತಿಳಿಸಿದರು.

ಆಗ ಅವರು, ತಾವು ಹುಟ್ಟಿನಿಂದ ಮುಸ್ಲಿಂ ಆಗಿ ಹಿಂದೂ ದೇವರ ಪೂಜೆಯ ನೇತೃತ್ವ ವಹಿಸಬಹುದೇ, ಪೂಜೆಗೆ ಕುಳಿತುಕೊಳ್ಳಬಹುದೇ ಎಂಬ ಜಿಜ್ಞಾಸೆ ಅವರ ತಲೆಹೊಕಿತು. ಇದೇ ಯೋಚನೆಯಲ್ಲಿ ಇದ್ದಾಗ ತಮ್ಮ ಮನೆ ಬಾಗಿಲ ಮುಂದೆ ಬ್ರಾಹ್ಮಣರ ರೂಪದಲ್ಲಿ ದೇವರು ಬಂದು, ‘ನಿನ್ನ ಸೇವೆಗಾಗಿ ನಾನು ಕಾಯುತ್ತಿದ್ದೇನೆ, ಕಾರ್ಯ ನಿರ್ವಹಿಸು’ ಎಂದು ಹೇಳಿ ಅಂರ್ತಧಾನವಾಯಿತು ಎಂದು ಮುಜೀಬ್ ಹೇಳಿದರು.

ದಂತೆ ಭಾಸವಾಯಿತಂತೆ.
ಈ ಘಟನೆಯ ಬಳಿಕ ಮುಜೀಬ್, ಬಿಳಿಗಿರಿರಂಗನ ನಾಥಸ್ವಾಮಿ ಮೂರ್ತಿ ಪ್ರತಿಷ್ಟಾಪನಾ ಪೂಜೆಯ ನೇತೃತ್ವ ವಹಿಸಿ, ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸಿದರು. ಅಂದಿನಿಂದ ಅವರು ಬಿಳಿಗಿರಿರಂಗನ ಪರಮ ಭಕ್ತರೂ ಆಗಿದ್ದಾರೆ.

ಸಂಪ್ರೋಕ್ಷಣೆ ಕಾರ್ಯಕ್ರಮದಲ್ಲಿ ಭಾಗಿ
ಶಿಥಿಲಗೊಂಡಿದ್ದ ಬಿಳಿಗಿರಿರಂಗನನಾಥ ಸ್ವಾಮಿಯ ದೇವಾಲಯವನ್ನು ಇದೀಗ ೫ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ದೇಗುಲದಲ್ಲಿ ನಡೆಯುತ್ತಿರುವ ಸಂಪ್ರೋಕ್ಷಣಾ ಕಾರ್ಯಕ್ರಮಕ್ಕೆ ಮುಜೀಬ್ ಅವರಿಗೆ ದೇವಾಲಯದ ವತಿಯಿಂದ ಆಹ್ವಾನ ನೀಡಲಾಗಿತ್ತು. ಈ ಆಹ್ವಾನದ ಮೇರೆಗೆ ಅವರು ಬೆಟ್ಟಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಬಿಳಿಗಿರಿ ರಂಗನಾಥಸ್ವಾಮಿಯನ್ನು ಆರಾಧಿಸಿದ್ದಾರೆ.