ಬಿಳಿಗಿರಿರಂಗನ ಬೆಟ್ಟದಿಂದ ಹಾರಿ ವ್ಯಕ್ತಿ ಆತ್ಮಹತ್ಯೆ: ಕಮರಿಯಲ್ಲಿ ಸಿಲುಕಿದ ಮೃತದೇಹ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.10- ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕವಲಂದೆ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಮಹದೇವನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಮೃತ ಮಹದೇವ ನಾಯಕ ಜೂ.5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೆÇೀಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ಕೊಟ್ಟಿದ್ದರು. ಜೂ.6 ರಂದು ಬಿಳಿಗಿರಿ ರಂಗನ ಬೆಟ್ಟದಲ್ಲಿ ಬೈಕ್ ಪತ್ತೆಯಾದ ಹಿನ್ನೆಲೆಜಾಡು ಹಿಡಿದ ಯಳಂದೂರು ಪೆÇಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು.
ಡ್ರೋನ್ ಕ್ಯಾಮರಾದಲ್ಲಿ ಕಮರಿ ನಡುವೆ ಶವ ಸಿಲುಕಿರುವುದು ಕಂಡು ಬಂದಿದ್ದು ಸಂಬಂಧಿಕರು ಶವದ ಮೇಲಿನ ಬಟ್ಟೆ ಗುರುತಿಸಿದ್ದಾರೆ. ಯಳಂದೂರು ಪೆÇಲೀಸರ ಶವ ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇನ್ನು, ಆತ್ಮಹತ್ಯೆಗೆ ನಿಖರಕಾರಣ ತಿಳಿದುಬಂದಿಲ್ಲ, ಯಳಂದೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.