ಬಿಳಸನೂರು ಸರ್ಕಾರಿ ಪ್ರೌಢಶಾಲೆಗೆ ಕಲಿಕೋಪಕರಣ ವಿತರಣೆ

ಹರಿಹರ.ಏ.11 : ಬಿಳಸನೂರು ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ (ರಿ )ನ ಮುಖ್ಯಸ್ಥರಾದ ಅರುಣಾ ದಿವಾಕರ್ ಅವರು 75,000ಗಳ ಮೌಲ್ಯದ ವಿಜ್ಞಾನ ಕಲಿಕೋಪಕರಣಗಳಾದ ಸೂಕ್ಷ್ಮದರ್ಶಕ,ಶ್ರುತಿ ಕವಿ, ಸೌರಮಾಪಕ, ಖನಿಜಗಳ ಸ್ಲೈಡ್ಗಳು , ಮೈಕ್ರೋ ಸ್ಲೈಡ್ಗಳು, ಲಿಪ್ಮಸ್ ಪೇಪರ್, ಗಾಸಿನ ಬುರುಡೆಗಳು, ಹೃದಯ,ಕಣ್ಣು, ಮೆದುಳು ಮಾದರಿಗಳು , ಪಿರಾಡಿಕ್ ಟೇಬಲ್ , ಕೆಲೆಡಿಯಸ್ಕೋಪ್ , ಇತರೆ ಪ್ರಾಣಿ, ಪಕ್ಷಿಗಳು, ಮಾನವನ ದೇಹದ ಭಾಗಗಳ ಚಾರ್ಟ್ ಗಳನ್ನು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು ವಿಶ್ವನಾಥ್, ಸಂಸ್ಥೆಯ ನಿರ್ದೇಶಕರಾ ದಿವಾಕರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ವಿಜ್ಞಾನ ಶಿಕ್ಷಕರದ ನಾಗರಾಜ್, ಜಗದೀಶ್, ಶಂಕರ್, ಗಂಗಾಧರಪ್ಪ, ಗಿರೀಶ್ ಮತ್ತು ಮಕ್ಕಳು ಹಾಜರಿದ್ದರು