ಬಿಲ್ ಮಂಜೂರಿಗೆ ಶೇ.೨೭ರಷ್ಟು ಪರ್ಸೆಂಟೇಜ್ ಕಿರುಕುಳ ಕ್ರಮಕ್ಕೆ ಒತ್ತಾಯ

(ಸಂಜೆವಾಣಿ ವಾರ್ತೆ)
ರಾಯಚೂರು, ಡಿ.೧೩-
ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸಿದರೂ ಬಿಲ್ ಮಂಜೂರಿಗೆ ಶೇ ೨೭ ರಷ್ಟು ಪರ್ಸೆಂಟೀಜ್ ಕೊಡುವಂತೆ ಕಿರುಕುಳ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಕೆ.ಆರ್ ಡಿಎಲ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಜೆ.ಇ. ವಸಂತ ಜೆ.ಇ. ಮತ್ತು ಸಾಗರ ಜೆ.ಇ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುತ್ತೇದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅಂದಾಜು ವೆಚ್ಚದಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಇವರು ಶೇ.೨೪ ರಷ್ಟು ಪರ್ಸೆಂಟೇಜ್ ನೀಡಿದರೆ ಬಿಲ್ಲು ಮಂಜೂರು ಮಾಡುತ್ತೇವೆ ಹೇಳುತ್ತಿದ್ದಾರೆ ಇವರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ತಾಲೂಕಿನ ರಘುನಾಥನಹಳ್ಳಿ ಗ್ರಾಮದಲ್ಲಿ ಆರ್.ಓ ಪ್ಲಾಂಟ್ ಕಾಮಗಾರಿ ಮಾಡಲು ಸಹಾಯಕ ಅಭಿಯಂತರರ ಕಚೇರಿ ಟೆಂಡರ್ ಪಡೆಯಲಾಗಿದೆ.ಈ ಕಾಮಗಾರಿ ಅಂದಾಜು ವೆಚ್ಚ ರೂ ೧೨ ಲಕ್ಷ ವಾಗಿರುತ್ತದೆ.
ಸದರಿ ಈ ಕಾಮಗಾರಿಯನ್ನು ಈ ಸಂಪೂರ್ಣವಾಗಿ ಮಾಡಿರುತ್ತೇನೆ. ಈ ಕಾಮಗಾರಿ ಬಿಲ್ಲನ್ನು ಮಂಜೂರು ಮಾಡುವಂತೆ ಕೇಳಿದರೆ ಪರ್ಸೆಂಟೀಜ್ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಇ ತೋರಿದ ಸ್ಥಳದಲ್ಲಿ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿದರು ಬಿಲ್ ಮಂಜೂರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.ಕಾಮಗಾರಿ ಫೋಟೋಗಳು ಜೆಇ ಅವರಿಗೆ ಕಳುಹಿಸಲಾಗಿದೆ ಎಂದು ದೂರಿದರು. ಕಾಮಗಾರಿ ಪೂರ್ಣ ನಂತರ ಬಿಲ್ ಕೇಳಿದರೆ ನೀವು ಯಾರು ಎಂದು ಕೇಳುತ್ತಿದ್ದಾರೆ ಎಂದು ಅಳಲು ವ್ಯಕ್ತಪಡಿಸಿದರು.
ಸಾಲ ಪಡೆದು ಕಾಮಗಾರಿ ಪೂರ್ಣಗೊಳಿಸಿದ್ದು ಕೂಡಲೇ ಕಾಮಗಾರಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಾಬು ಗುತ್ತೇದಾರ ಸೇರಿದಂತೆ ಉಪಸ್ಥಿತರಿದ್ದರು.