ಬಿಲ್ವ ಮಂದಿರದಲ್ಲಿ ಸಾಮೂಹಿಕ ಕಾರ್ತಿಕ ದೀಪೋತ್ಸವ

ರಾಯಚೂರು.ನ.೧೬- ನಗರದ ಬಿ.ಎಂ.ಡಿ. (ಬೊಳಮದೊಡ್ಡಿ) ರೋಡ್‌ನ ಮಧುರನಗರದ ಬಿಲ್ವ ಮಂದಿರದಲ್ಲಿ ನ.೧೪ ಸೋಮವಾರದಂದು ಅದ್ದೂರಿಯಾಗಿ ಕಾರ್ತೀಕ ದಿಪೋತ್ಸವ ಕಾರ್ಯಕ್ರಮ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ನೆಲ್ಲಿಕಾಯಿ ಗಿಡಕ್ಕೆ ಸುಮಂಗಲಿಯರಿಂದ ಪೂಜೆ ಹಾಗೂ ಭಕ್ತಾದಿಗಳಿಗೆ ಸಾಮೂಹಿಕ ವನ ಭೋಜನ ಏರ್ಪಡಿಸಲಾಗಿತು.
ಸುತ್ತಮುತ್ತಲಿನ ಏರಿಯಾದ ಭಕ್ತಾದಿಗಳು ಭಾಗವಹಿಸಿ ಭಕ್ತಿ ಭಾವದಿಂದ ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲಾ ಸದಸ್ಯರುಗಳು ಭಾಗವಹಿಸಿದರು.