ಬಿಲ್ಡ್ ಟೆಕ್-2022 ಉದ್ಘಾಟನೆ

ಹುಬ್ಬಳ್ಳಿ,ನ19: ಹುಬ್ಬಳ್ಳಿ ನಗರದಲ್ಲಿ ಯು.ಎಸ್. ಕಮ್ಯೂನಿಕೇಷನ್ಸ್, ಬೆಂಗಳೂರು ಇವರ ವತಿಯಿಂದ ಬಿಲ್ಡ್ ಟೆಕ್-2022 ಬೃಹತ್ ವಸ್ತು ಪ್ರದರ್ಶನ ಉದ್ಘಾಟನೆಯು ನೆರವೇರಿತು.
ಕಾರ್ಯಕ್ರಮದ ಪ್ರಾಯೋಜಕರು ಬ್ಯಾಂಕ ಆಫ್ ಬರೋಡಾ ಮತ್ತು ಸಹ ಪ್ರಾಯೋಜಕರು ಲಿಂಟೆಲ್ ಬಿಲ್ಡಿಂಗ್ ಸಲ್ಯೂಷನ್ಸ್ ಆಗಿದ್ದು, ಈ ವಸ್ತು ಪ್ರದರ್ಶನದಲ್ಲಿ ಕಟ್ಟಡ ಸಾಮಗ್ರಿಗಳು ಮತ್ತು ಗೃಹಾಲಂಕಾರ ವಸ್ತುಗಳ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಈ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ದಿನಾಂಕ 20ರ ವರೆಗೆ ಪ್ರದರ್ಶನ ಇಂದಿರಾ ಗಾಜಿನ ಮನೆ, ಹುಬ್ಬಳ್ಳಿ ಇಲ್ಲಿ ಪ್ರಾರಂಭಗೊಂಡಿದ್ದು, ವಿವಿಧ ಕಂಪನಿಗಳು ಒಂದೇ ಸೂರಿನಡಿ ಆಧುನಿಕ ತಂತ್ರಜ್ಞಾನ ಹಾಗೂ ಕಟ್ಟಡ ಸಾಮಗ್ರಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವುದು ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮಹಾಪೌರರಾದ ಈರೇಶ ಅಂಚಟಗೇರಿ, ಆನಂದ ಪಾಂಡುರಂಗಿ, ಸಾಜೀದ್ ಆಯ್. ಫಾರೇಶ, ಪ್ರದೀಪ ದೇಸಾಯಿ, ಸಮರ್ಥ ನಾಡಿಗೇರ, ಸುಮಂತ ಹೆಗಡೆ ಉಪಸ್ಥಿತರಿದ್ದರು.